ಜುಲೈ 21 ರಂದು ಜೆಡಿಎಸ್ ರೈತ ಸಮಾವೇಶ : ಹೆಚ್ಡಿಕೆ

ನರಗುಂದ ಮತ್ತು ನವಲಗುಂದ ರೈತರು ಹುತಾತ್ಮರಾದ ದಿನದ ಅಂಗವಾಗಿ ಜುಲೈ21 ರಂದು ಉತ್ತರ ಕರ್ನಾಟಕ ಭಾಗದಲ್ಲಿ ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ 224 ವಿಧಾನಸಭೆ ಕ್ಷೇತ್ರಗಳ ಜೆಡಿಎಸ್ ಘಟಕಗಳ ಅಧ್ಯಕ್ಷರ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ-ಅಥವಾ ಬಿಜಾಪುರದಲ್ಲಿ ಸಮಾವೇಶ ನಡೆಯಲಿದ್ದು, ರಾಜ್ಯದ ರೈತರಿಗೆ ಸಂಬಂಧಿಸಿದಂತೆ ಕೆಲವೊಂದು ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇನ್ಮುಂದೆ ಪ್ರತಿ ವಾರ ಒದೊಂದು ವಿಧಾನಸಭೆ ಕ್ಷೇತ್ರದ ಸಭೆ ನಡೆಸಿ ಚುನಾವಣೆ ಸಿದ್ಧತೆ ಬಗ್ಗೆ ಸಮಾಲೋಚನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಚುನಾವಣೆಯ ಡಿಸೆಂಬರ್‌ಗೆ ಬರಲಿ ಅಥವಾ ಮುಂದಿನ ಏಪ್ರಿಲ್‌ನಲ್ಲೇ ನಡೆಯಲಿ. ನಾವು ಈಗಿನಿಂದಲೇ ಸಜ್ಜಾಗುತ್ತೇವೆ ಎಂದು ಹೇಳಿದರು.
Comments