ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಸುವರ್ಣಪರ್ವದ ಆರಂಭ - ಯಡಿಯೂರಪ್ಪ
ಸ್ವತಂತ್ರ ಭಾರತದ ಬಹುದೊಡ್ಡ ಮತ್ತು ಮಹತ್ವಪೂರ್ಣ ಆರ್ಥಿಕ ಸುಧಾರಣೆಗೆ ನಿನ್ನೆ ಸಂಸತ್ ಭವನದ ಸೆಂಟ್ರಲ್ ಹಾಲ್ ಸಾಕ್ಷಿಯಾಯಿತು. ಮಹಾಮಹಿಮ ರಾಷ್ಟ್ರಪತಿಯವರು ಹಾಗು ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಬಹುನಿರೀಕ್ಷಿತ GST ಗೆ (ಸರಕು ಮತ್ತು ಸೇವಾ ತೆರಿಗೆ) ಅಧಿಕೃತವಾಗಿ ಚಾಲನೆ ನೀಡಿದರು. ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುವ ಮೂಲಕ ಚಾಲ್ತಿಯಲ್ಲಿದ್ದ ಅನೇಕ ಅಪರೋಕ್ಷ ತೆರಿಗೆಗಳನ್ನು ಒಟ್ಟು ಗೂಡಿಸಿ ’ಒಂದು ರಾಷ್ಟ್ರ ಒಂದು ತೆರಿಗೆ’ ಎನ್ನುವಂತೆ GST ಯನ್ನು ಜಾರಿಗೊಳಿಸಲಾಗಿದೆ. ತೆರಿಗೆ ವಂಚನೆ ಇನ್ನುಮುಂದೆ ಸಾಧ್ಯವಿಲ್ಲ. ಪ್ರಾಮಾಣಿಕರಿಗೆ ಯಾವುದೇ ಹೊರೆಯಿಲ್ಲ. ಭಾರತದ ಆರ್ಥಿಕ ಭವಿಷ್ಯಕ್ಕೆ ಹೊಸದಿಕ್ಕು ನೀಡಿರುವ ಈ ಸುಧಾರಣೆ ಶ್ರೀ ನರೇಂದ್ರ ಮೋದಿ ಸರ್ಕಾರದ ಮತ್ತೊಂದು ಮಹತ್ವದ ಮೈಲಿಗಲ್ಲು
Comments