ದೇವೇಗೌಡರು ಮೀರಾ ಕುಮಾರ್ ಬಗ್ಗೆ ಹೇಳಿದ್ದೇನು?

ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿರುವ ಮೀರಾ ಕುಮಾರ್ ಗೆ ನಮ್ಮ ಬೆಂಬಲ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.
ಮೀರಾ ಕುಮಾರ್ ಅವರನ್ನು ಬೇಟಿಯಾದ ಬಳಿಕ ಮಾತನಾಡಿದ ಅವರು, ಮೀರಾ ಕುಮಾರ್ ಸ್ಪೀಕರ್, ರಾಜಕಾರಣಿಯಾಗಿ ಸಾಕಷ್ಟು ಅನುಭವವಿರುವ ಮಹಿಳೆ. ಅವರ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದ್ದಾರೆ.
ಇದು ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ನಡೆಯುತ್ತಿರುವ ಚುನಾವಣೆ ಎಂದು ಬೆಂಗಳೂರಿಗೆ ಭೇಟಿ ನೀಡಿದ ಮೀರಾಕುಮಾರ್ ಅವರನ್ನು ಭೇಟಿಯಾದ ಬಳಿಕ ಗೌಡರು ಹೇಳಿದ್ದಾರೆ. ಜೆಡಿಎಸ್ ನ ಎಲ್ಲಾ ಮತಗಳೂ ಮೀರಾ ಅವರಿಗೇ. ಕೇರಳದಲ್ಲೂ ಅವರಿಗೆ ಬೆಂಬಲವಿದೆ. ಅವರನ್ನು ಗೆಲ್ಲಿಸಲು ಎಲ್ಲಾ ಪ್ರಯತ್ನ ನಡೆಸುವುದಾಗಿ ಗೌಡರು ಹೇಳಿದ್ದಾರೆ.
Comments