ಬಾಗಲಕೋಟೆಯಲ್ಲಿ ರಸ್ತೆ ಸೇತುವೆ ಕಾಮಗಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ
ಹುನಗುಂದ ತಾಲೂಕಿನ ಅಡವಿಹಾಳ ಕೂಡಲಸಂಗಮ ನಡುವೆ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸುವ ರಸ್ತೆ ಸೇತುವೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಗುರುವಾರ ಕೂಡಲಸಂಗಮದಲ್ಲಿ ಹಮ್ಮಿಕೊಂಡ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು ಒಟ್ಟು 59 ಕೋಟಿ ರೂ.ಗಳ ವೆಚ್ಚದಲ್ಲಿ ಈ ರಸ್ತೆ ಸೇತುವ ನಿರ್ಮಿಸಲಾಗುತ್ತಿದೆ. ವಿವಿಧ ಕಡೆಗಳಿಂದ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಬಹುದಿನಗಳ ಬೇಡಿಕೆಯೂ ಕೂಡ ಈ ಭಾಗದ ಜನರದ್ದಾಗಿತ್ತು ಎಂದರು. ಹಿಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ ಅವರ ಸರಕಾರದಲ್ಲಿ ಹಣಕಾಸಿನ ಮಂತ್ರಿಯಾಗಿದ್ದಾಗ ಕೂಡಲ ಸಂಗಮ ಅಭಿವೃದ್ದಿ 50 ಕೋಟಿ ರೂ. ನೀಡಲಾಗಿತ್ತು.
Comments