ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮಧ್ಯಾಂತರ ಆದೇಶ ನೀಡಿದೆ.

ಜಂತಕಲ್ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ ಕೊನೆ ವಾರದವರೆಗೆ ವಿಚಾರಣೆ ಮುಂದೂಡಿ ಹೈಕೋರ್ಟ್ ಮಧ್ಯಾಂತರ ಆದೇಶ ನೀಡಿದೆ.
ಜಂತಕಲ್ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ ಕೊನೆ ವಾರದವರೆಗೆ ವಿಚಾರಣೆ ಮುಂದೂಡಿ ಹೈಕೋರ್ಟ್ ಮಧ್ಯಾಂತರ ಆದೇಶ ನೀಡಿದೆ.
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ , ಈ ಹಿಂದೆ ಇದೇ ಆರೋಪಕ್ಕೆ ಪ್ರಕರಣ ಸಂಖ್ಯೆ. 1/2017 ಕ್ಕೆ ಜಾಮೀನು ಪಡೆಯಲಾಗಿದೆ. ಆದರೆ ಎಸ್.ಐ. ಟಿ. ರವರು ಪ್ರಕರಣ ಸಂಖ್ಯೆ 10/2015 ರಲ್ಲಿ ಹೆಚ್.ಡಿ.ಕೆ. ರವರನ್ನು ವಿಚಾರಣೆಗೆ ಒಳಪಡಿಸಲು ಕೋರಿರುತ್ತಾರೆ, ಆದರೆ ಪ್ರಕರಣ ಸಂಖ್ಯೆ 10/2015 ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ವಿನೋದ್ ಗೋಯಲ್ ರವರ ಮೇಲೆ ಸುಳ್ಳು ದಾಖಲೆಗಳ ಆರೋಪದಡಿ ಪ್ರಕರಣ ದಾಖಲಾಗಿರುತ್ತದೆ. ಆ ಪ್ರಕರಣಕ್ಕೂ ಹೆಚ್.ಡಿ.ಕೆ. ರವರಿಗೂ ಯಾವುದೇ ಸಂಬಂಧವಿರುವುದಿಲ್ಲ. ಆದರೆ ಎಸ್.ಐ.ಟಿ. ರವರ ವಾದವನ್ನು ಕೇಳಿದ ನ್ಯಾಯಾಧೀಶರು ಪ್ರ.ಸಂ.10/2015 ದಾಖಲಾಗಿ 2 ವರ್ಷಗಳಾದರೂ ಇದುವರೆಗೂ ತನಿಖೆ ನಡೆಸದೆ ಏನು ಮಾಡುತ್ತಿದ್ದೀರಿ ಹಾಗೂ ಈ ಪ್ರಕರಣದಲ್ಲಿರುವ ಆರೋಪಕ್ಕೂ ಕುಮಾರಸ್ವಾಮಿರವರಿಗೂ ಸಂಬಂಧವಿಲ್ಲ,ಈ ಪ್ರಕರಣದಲ್ಲಿ ಅವರನ್ನು ಸೇರಿಸುವ ಅಗತ್ಯವೇನು..? ಸುಪ್ರೀಂಕೋರ್ಟ್ ಆದೇಶದಂತೆ ಪ್ರ. ಸಂ.1/2017 ರಲ್ಲಿ ತನಿಖೆ ಏಕೆ ನಡೆಸುತ್ತಿಲ್ಲ..?
ಈ ಬಗ್ಗೆ ನಿಲುವು ಸ್ಪಷ್ಟಪಡಿಸಿ ಹಾಗೂ ಸುಪ್ರೀಂಕೋರ್ಟ್ ನಿಂದ ಸ್ಪಷ್ಟೀಕರಣ ತನ್ನಿ ಎಂದು ಛೀಮಾರಿಹಾಕಿ ವಿಚಾರಣೆಯನ್ನು ಜುಲೈ ಕೊನೆ ವಾರಕ್ಕೆ ಮುಂದೂಡಿದೆ.
ಇದೇ ವೇಳೆ ಒಂದೇ ಆರೋಪಕ್ಕೆ ಸಂಬಂಧಿಸಿದಂತೆ ಒಟ್ಟು 5 ಪ್ರಕರಣಗಳು( 01/2017, 16/2014, 63/2011, 155/2011, 10/2015) ದಾಖಲಾಗಿರುವುದನ್ನು ನೋಡಿ ನ್ಯಾಯದೀಶರು ಆಶ್ಚರ್ಯ ವ್ಯಕ್ತಪಡಿಸಿದರು.
Comments