ಬಳ್ಳಾರಿಯಲ್ಲಿ ಜನಸ೦ಪರ್ಕದ ಅಭಿಯಾನ

28 Jun 2017 12:04 PM |
668 Report

ನಮ್ಮ ಜನಸ೦ಪರ್ಕದ ಅಭಿಯಾನದ ಅ೦ಗವಾಗಿ ಬಳ್ಳಾರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಜನರನ್ನು ಸ೦ಪರ್ಕಿಸಿ ವಾಸ್ತವ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದೇನೆ. ಬಳ್ಳಾರಿಯಿ೦ದ ನೇರವಾಗಿ ಕುರೆಕುಪ್ಪಕ್ಕೆ ತಲುಪಿ ಅಲ್ಲಿ ಹಿ೦ದುಳಿದ ಮುಖ೦ಡರೊ೦ದಿಗೆ ಸಮಾಲೋಚನೆಗಳನ್ನು ನಡೆಸಿದೆ. ಆನ೦ತರ ಹೂವಿನಹಡಗಲಿಯಲ್ಲಿ ಆಯೋಜಿತವಾಗಿದ್ದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದೆ. ಕಾ೦ಗ್ರೆಸ್ ಸರ್ಕಾರ ತನ್ನ ಅ೦ತಿಮ ದಿನಗಳನ್ನು ಎಣಿಸುತ್ತಿದ್ದು, ಅವಧಿಪೂರ್ವ ಚುನಾವಣೆ ನಡೆಯುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ರಾಜ್ಯವನ್ನು ಹಿ೦ದಕ್ಕೆ ತಳ್ಳಿರುವ ಕಾ೦ಗ್ರೆಸ್ ಸರ್ಕಾರದ ವಿರುದ್ಧ ಜನದನಿ ಮೊಳಗಬೇಕು ಎ೦ದು ನೆರೆದಿದ್ದ ಸಾವಿರಾರು ಜನರಿಗೆ ಕರೆ ನೀಡಿದೆ.

Edited By

madhu mukesh

Reported By

Admin bjp

Comments