ಆದಿಚುಂಚನಗಿರಿ ಶಾಖಾ ಮಠದಲ್ಲಿ ಗುಡುಗಿದ ದೇವೇಗೌಡರು

27 Jun 2017 3:48 PM |
1415 Report

ಚಿಕ್ಕಬಳ್ಳಾಪುರ, ಜೂ.27- ಒಕ್ಕಲಿಗರನ್ನು ಕೆಣಕಿದರೆ ಹುಷಾರ್. ಜನಾಂಗವನ್ನು ತುಳಿಯಲು ಬಂದರೆ ಎಲ್ಲರೂ ಒಗ್ಗೂಡಿ ಹೋರಾಡಬೇಕಾಗುತ್ತದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಗುಡುಗಿದ್ದಾರೆ. ನಗರದ ಆದಿಚುಂಚನಗಿರಿ ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರಿಗೂ ನ್ಯಾಯ ದೊರಕಿಸಿಕೊಡಬೇಕೆಂಬುದು ನಮ್ಮ ಆಶಯ. ಕೆಲವರು ಜನಾಂಗವನ್ನು ತುಳಿಯಲು ಮುಂದಾಗಿದ್ದಾರೆ. ಇದರ ವಿರುದ್ಧ ಎಲ್ಲರೂ ಒಗ್ಗೂಡಿ ಹೋರಾಡಬೇಕೆಂದು ಕರೆ ನೀಡಿದರು.

ಕೆಂಪೇಗೌಡ ಜಯಂತಿ ಆಚರಣೆಗೆ ಆದಿಚುಂಚನಗಿರಿ ಮಠಾಧೀಶರಾದ ಡಾ.ನಿರ್ಮಾಲಾನಂದನಾಥಸ್ವಾಮೀಜಿ ಅವರೇ ಕಾರಣ. ಈ ಬಾರಿ ಸರ್ಕಾರದಿಂದ ಮೊದಲ ಬಾರಿಗೆ ಕೆಂಪೇಗೌಡ ಜಯಂತಿ ಆಚರಣೆ ಮಾಡುತ್ತಿರುವುದು ಸಂತಸದ ವಿಷಯ ಎಂದರು. ಈ ಜಯಂತಿಗೆ ಪಕ್ಷಾತೀತವಾಗಿ ಎಲ್ಲಾ ನಾಯಕರ ಸಹಕಾರವಿದೆ. ಕೆಂಪೇಗೌಡರ ಕೊಡುಗಡೆ ಎಂದೆಂದಿಗೂ ಅನನ್ಯ. ವಿಶೇಷವಾಗಿ ಬೆಂಗಳೂರು ಕಟ್ಟಿ ಬೆಳೆಸಿದ ಧೀಮಂತ ನಾಯಕ. ಇಂತಹ ಮಹಾನ್ ಸಾಧನೆ ಮಾಡಿದ ನಾಯಕನನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

Edited By

Vokkaligara Varthe

Reported By

Vokkaligara Varthe

Comments