ದೇವೇಗೌಡರ ಕಾಲಿಗೆ ನಮಸ್ಕರಿಸಿದ ಡಿ.ಕೆ.ಶಿವಕುಮಾರ್

ಬದ್ಧವೈರಿಗಳೂ ಕೆಲವು ಬಾರಿ ಪರಸ್ಪರ ಒಂದಾಗುತ್ತಾರೆ ಎನ್ನುವುದು ಸಾಬೀತಾಗಿದೆ. ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್, ಇಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕಾಲಿಗೆ ನಮಸ್ಕರಿಸಿದ ಘಟನೆ ನಡೆಯಿತು.
ನಾಡಪ್ರಭು ಕೆಂಪೇಗೌಡರ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವ ಶಿವಕುಮಾರ್, ವೇದಿಕೆಯ ಮೇಲಿದ್ದ ಸ್ವಾಮಿಗಳು, ದೇವೇಗೌಡರು ಸೇರಿದಂತೆ ಹಿರಿಯರು, ಗಣ್ಯರಿಗೆ ನಮಸ್ಕರಿಸಿದರು.
ಹಲವಾರು ವರ್ಷಗಳಿಂದ ಪರಸ್ಪರ ಕತ್ತಿ ಮಸೆಯುತ್ತಿರುವ ದೇವೇಗೌಡರ ಕುಟುಂಬ ಮತ್ತು ಡಿ.ಕೆ.ಶಿವಕುಮಾರ್ ಕುಟುಂಬದ ನಡುವಿನ ವೈಮನಸ್ಸು ಜಗಜ್ಜಾಹಿರವಾಗಿದೆ. ಆದರೆ, ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುವಲ್ಲ ಎನ್ನುವುದು ಸಚಿವ ಶಿವಕುಮಾರ್ ಸಾಬೀತುಪಡಿಸಿದ್ದಾರೆ.
ಇಂಧ ಖಾತೆ ಸಚಿವ ಡಿ.ಕೆ.ಶಿವಕುಮಾರ್ ದೇವೇಗೌಡರ ಕಾಲಿಗೆ ನಮಸ್ಕರಿಸಿರುವುದು ಉತ್ಸವದಲ್ಲಿ ಪಾಲ್ಗೊಂಡಿದ್ದ ಸಭಿಕರಿಗೆ ಅಚ್ಚರಿ ಮೂಡಿಸಿತು.
Comments