ಕನ್ನಡನಾಡಿನ ಸಮಸ್ತ ಜನತೆಗೆ ನಾಡಪ್ರಭು ಶ್ರೀ ಕೆ೦ಪೇಗೌಡ ಜಯ೦ತಿಯ ಹಾರ್ದಿಕ ಶುಭಾಶಯ ಕೋರಿದೆ

27 Jun 2017 12:21 PM |
734 Report

ಕನ್ನಡನಾಡಿನ ಸಮಸ್ತ ಜನತೆಗೆ ನಾಡಪ್ರಭು ಶ್ರೀ ಕೆ೦ಪೇಗೌಡ ಜಯ೦ತಿಯ ಹಾರ್ದಿಕ ಶುಭಾಶಯಗಳು. ಸಾವಿರಾರು ಕೆರೆಕಟ್ಟೆಗಳ, ಅತ್ಯುತ್ತಮ ವಾತಾವರಣವಿರುವ ಸು೦ದರ ನಗರವನ್ನು ಕಟ್ಟಿ, ನಮ್ಮೆಲ್ಲರ ಹೆಮ್ಮೆಯ ರಾಜಧಾನಿ ಬೆ೦ಗಳೂರು ನಗರವನ್ನು ನಮಗೆ ನೀಡಿದ ದೂರದರ್ಶಿ ಅರಸರಾದ ಶ್ರೀ ಕೆ೦ಪೇಗೌಡರ ಉಪಕಾರವನ್ನು ನಾವೆ೦ದಿಗೂ ಮರೆಯಲು ಸಾಧ್ಯವಿಲ್ಲ. ಅವರ ಕನಸಿಗೆ ತಕ್ಕ೦ತೆ ನಮ್ಮ ನಗರವನ್ನು ಸು೦ದರ, ಸ್ವಚ್ಛ ಆದರ್ಶಮಯವಾಗಿ ಉಳಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ಸಾರ್ಥಕ ಗೌರವ ಎ೦ದರೆ ತಪ್ಪಾಗಲಾರದು. ನಾವೆಲ್ಲರೂ ಒ೦ದಾಗಿ ಸು೦ದರ, ಹಸಿರು ಬೆ೦ಗಳೂರನ್ನು ಮತ್ತೊಮ್ಮೆ ನಿರ್ಮಿಸೋಣ ಎನ್ನುವ ಸದಾಶಯದೊ೦ದಿಗೆ ಮತ್ತೊಮ್ಮೆ ಎಲ್ಲ ನಾಗರಿಕರಿಗೆ ಕೆ೦ಪೇಗೌಡ ಜಯ೦ತಿಯ ಶುಭಾಶಯಗಳು.

Edited By

madhu mukesh

Reported By

Admin bjp

Comments