ಬೆಂಗಳೂರಿನಲ್ಲಿ ಸರಣಿ ಸಭೆಗಳು ನಡೆಸಲಾಯಿತು
ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಶ್ರೀ ಅಮಿತ್ ಶಾ ರವರು ನಮ್ಮ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಸರಣಿ ಸಭೆಗಳನ್ನು ನಡೆಸಿದೆ. ಮುಂದಿನ ಚುನಾವಣೆಯ ಕುರಿತು ಕಾರ್ಯತಂತ್ರ ರೂಪಿಸುವ ದೃಷ್ಟಿಯಿಂದ ಅಮಿತ್ ಶಾರವರ ಭೇಟಿ ಅತ್ಯಂತ ಮಹತ್ವಪೂರ್ಣದ್ದಾಗಿದೆ. ಪಕ್ಷ ಸಂಘಟನೆಯೂ ಸೇರಿದಂತೆ ಮಾನ್ಯ ಅಮಿತ್ ಶಾರವರೊಂದಿಗೆ ಚರ್ಚಿಸಬೇಕಾದ ಅನೇಕ ವಿಷಯಗಳ ಕುರಿತು ಸಭೆಯಲ್ಲಿ ಪ್ರಸ್ತಾಪ ಮಾಡಲಾಯಿತು. ಪಕ್ಷದ ಅನೇಕ ಹಿರಿಯ ನಾಯಕರುಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಅಮಿತ್ ಶಾರವರ ಆಗಮನದ ಹಿನ್ನೆಲೆಯಲ್ಲಿ ಪಕ್ಷದ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳಲಿವೆ.
Comments