ಮಲ್ಲೇಶ್ವರಂ ನ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಯೋಗದಿನಾಚರಣೆ ಕಾರ್ಯಕ್ರಮ
ಇಂದು ಎಲ್ಲ ಭಾರತೀಯರು ಹೆಮ್ಮೆ ಪಡುವಂತಹ ದಿವಸ. ಭಾರತದ ಹೆಮ್ಮೆಯ ಯೋಗಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಿ ಅಂತರರಾಷ್ಟ್ರೀಯ ಮನ್ನಣೆ ಪಡೆದು ಇಂದಿಗೆ 3 ವರ್ಷಗಳು ಆಗಿವೆ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಪ್ರಯತ್ನದಿಂದ ವಿಶ್ವಸಂಸ್ಥೆ ಇಂದಿನ ದಿನವನ್ನು ಅಂತರರಾಷ್ಟ್ರೀಯ ಯೋಗದಿನವನ್ನಾಗಿ ಆಚರಿಸಲು ಘೋಷಿಸಿದೆ. ವಿಶ್ವದಾದ್ಯಂತ 175 ಕ್ಕೂ ಹೆಚ್ಚು ದೇಶಗಳು ಯೋಗದಿನವನ್ನು ಆಚರಿಸುತ್ತಿವೆ. ಇಂದು ಪಕ್ಷದ ಕೇಂದ್ರ ಕಛೇರಿಯ ಆವರಣದಲ್ಲಿ ಅನೇಕ ಯೋಗ ಪಟುಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ನಂತರ ಮಲ್ಲೇಶ್ವರಂ ನ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಯೋಗದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಲಾ ಕಾಲೇಜುಗಳಲ್ಲಿ ಯೋಗ ಶಿಕ್ಷಣವನ್ನು ಪ್ರೋತ್ಸಾಹಿಸಬೇಕೆಂದು ಹೇಳಿದೆ.
Comments