ಮಂಡ್ಯ ಜಿಲ್ಲೆಯಲ್ಲಿ ಜನಸಂಪರ್ಕ ಅಭಿಯಾನ
ಜನರು ಕೂಡ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಮೇಲುಕೋಟೆಯಿಂದ ಪಾಂಡವಪುರಕ್ಕೆ ತೆರಳಿ ಅಲ್ಲಿನ ಕೆರೆ ವೀಕ್ಷಣೆ ನಡೆಸಿದೆ.
ಜನಸಂಪರ್ಕ ಅಭಿಯಾನಕ್ಕೆ ಉತ್ತಮ ಜನಬೆಂಬಲ ದೊರಕುತ್ತಿದೆ. ಇಂದು ಮಂಡ್ಯ ಜಿಲ್ಲೆಯಲ್ಲಿ ಅಭಿಯಾನ ನಡೆಸಿದೆ. ಮೇಲುಕೋಟೆಯಲ್ಲಿ ಹಿಂದುಳಿದ ವರ್ಗಗಳ ಮುಖಂಡರೊಡನೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡವರಿಗಾಗಿ ಮತ್ತು ಹಿಂದುಳಿದವರಿಗಾಗಿ ಹಮ್ಮಿಕೊಂಡಿರುವ ಅನೇಕ ಜನಹಿತ ಯೋಜನೆಗಳ ಲಾಭ ನಮ್ಮ ನಾಡಿನ ಪ್ರತಿಯೊಬ್ಬರೂ ಪಡೆದುಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಅಭಿಯಾನದ ಸಮಯದಲ್ಲಿ ಕೇಂದ್ರದ ಯೋಜನೆಗಳ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ. ಜನರು ಕೂಡ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಮೇಲುಕೋಟೆಯಿಂದ ಪಾಂಡವಪುರಕ್ಕೆ ತೆರಳಿ ಅಲ್ಲಿನ ಕೆರೆ ವೀಕ್ಷಣೆ ನಡೆಸಿದೆ. ನಂತರ ಶ್ರೀರಂಗಪಟ್ಟಣದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಸಂಕಷ್ಟದಲ್ಲಿರುವ ನಮ್ಮ ರೈತರಿಗೆ ನೆರವಾಗಲು ಕನಿಷ್ಠ ಪಕ್ಷ ಸಾಲಮನ್ನಾ ಮಾಡಲೇಬೇಕು.
Comments