ಮೈಸೂರಿನಲ್ಲಿ ಜನಸಂಪರ್ಕ ಅಭಿಯಾನ
ಮೈಸೂರಿನಲ್ಲಿ ಜನಸಂಪರ್ಕ ಅಭಿಯಾನ
ಮೈಸೂರಿನಲ್ಲಿಂದು ಜನಸಂಪರ್ಕ ಅಭಿಯಾನವನ್ನು ನಡೆಸಿದೆ. ಜಿಲ್ಲೆಯ ಉದ್ದಗಲಕ್ಕೂ ಬರದ ಛಾಯೆ ಆಕ್ರಮಿಸಿದೆ. ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡದೆ ನಿರ್ಲಕ್ಷ್ಯ ಮಾಡಿದೆ. ಹುಣಸೂರಿನ ಭಾರಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ, ಮೋದಿ ಮಾದರಿಯಲ್ಲಿ ರಾಜ್ಯವನ್ನು ಅಭಿವೃದ್ಧಿಯಲ್ಲಿ ನಂಬರ್ ೧ ಆಗಿಸುವ ಇಂಗಿತವನ್ನು ಸಭೆಯಲ್ಲಿ ವ್ಯಕ್ತಪಡಿಸಿದೆ. ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ದೇಸಿ ಕ್ರೀಡೆಯಾದ ಕಬ್ಬಡಿ ಆಟಗಾರರಿಗೆ ಉತ್ತೇಜನ ನೀಡಿದೆ. ನಂತರ ಮೈಸೂರಿನಲ್ಲಿ ಕಾರ್ಯಕರ್ತರ ಸಭೆ ನಡೆಸಿ, ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಲೇ ಬೇಕು ಎಂದು ಒತ್ತಾಯ ಮಾಡಿದೆ.
Comments