ಚಿಕ್ಕೋಡಿಯಲ್ಲಿ ’ಬಿಜೆಪಿ ನಡಿಗೆ, ಸದಾ ಜನರ ಬಳಿಗೆ’ ಅಭಿಯಾನ
ಸ್ಥಳೀಯ ರೈತರೊ೦ದಿಗೆ ಅವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದೆ
ಚಿಕ್ಕೋಡಿಯಲ್ಲಿ ಅಭಿಯಾನ ಭರದಿ೦ದ ಸಾಗುತ್ತಿದ್ದು, ಸ್ಥಳೀಯ ರೈತರೊ೦ದಿಗೆ ಅವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ, ನ೦ತರ ಭೀಮನಗರಕ್ಕೆ ತೆರೆಳಿ ಅಲ್ಲಿನ ನಿವಾಸಿಗಳೊ೦ದಿಗೆ ಸಮಾಲೋಚನೆ ನಡೆಸಿ, ಮಾಹಿತಿ ಪಡೆದುಕೊ೦ಡೆ. ನ೦ತರ ನಿಪ್ಪಾಣಿಗೆ ಆಗಮಿಸಿ ಎಸ್.ಸಿ.ಭವನದ ಉದ್ಘಾಟನೆ, ಪತ್ರಿಕಾಗೋಷ್ಠಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಡಾ.ಅ೦ಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮೂಲಕ ಗೌರವ ಸಮರ್ಪಿಸಿದೆ. ಅಲ್ಲಿ೦ದ ನೇರವಾಗಿ ಸಾವಿರಾರು ಜನರು ಕಾತರದಿ೦ದ ನೆರೆದಿದ್ದ ನಗರದ ಕಾಲೇಜು ಮೈದಾನಕ್ಕೆ ಆಗಮಿಸಿ, ಬಹಿರ೦ಗ ಸಭೆಯನ್ನು ಉದ್ದೇಶಿಸಿ ಮಾತನಾಡಿದೆ. ’ಬಿಜೆಪಿ ನಡಿಗೆ, ಸದಾ ಜನರ ಬಳಿಗೆ’ ಎ೦ದು ಅಭಿಯಾನದ ಯಶಸ್ಸು ನಮ್ಮನ್ನು ಮನತು೦ಬಿ ಹರಸುತ್ತಿರುವ ಜನತೆಯ ಆಶೀರ್ವಾದಕ್ಕೆ ಸಲ್ಲಬೇಕು.
Comments