ಕಲ್ಬುರ್ಗಿಯಲ್ಲಿ ಪಕ್ಷದ ಜನಸಂಪರ್ಕ ಅಭಿಯಾನ
ಬಿಜೆಪಿ ಎಸ್.ಸಿ/ಎಸ್.ಟಿ ಮೊರ್ಚಾದ ಉಪಾಧ್ಯಕ್ಷ ಹರೀಶ್ ಅವರ ಹತ್ಯೆಯನ್ನು ತೀವ್ರವಾಗಿ ಖಂಡಿಸಿ ಸರ್ಕಾರ ಕೂಡಲೆ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ
ಎಲ್ಲೆಡೆ ವ್ಯಕ್ತವಾಗುತ್ತಿರುವ ಜನರ ಪ್ರೀತಿ ವಿಶ್ವಾಸ ಮತ್ತು ಉತ್ಸಾಹಗಳು ಪಕ್ಷದ ಜನಸಂಪರ್ಕ ಅಭಿಯಾನಕ್ಕೆ ಮತ್ತಷ್ಟು ಬಲ ನೀಡಿದೆ. ಇಂದು ಅಭಿಯಾನವನ್ನು 10ನೇ ಜಿಲ್ಲೆ ಕಲ್ಬುರ್ಗಿಯಲ್ಲಿ ಮುಂದುವರೆಸಿದೆ. ಮೊದಲಿಗೆ ಪತ್ರಿಕಾ ಗೋಷ್ಠಿ ನಡೆಸಿ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ರಾಜ್ಯ ಸರ್ಕಾರದ ದುರಾಡಳಿತಕ್ಕೆ ಮತ್ತೊಬ್ಬ ಬಿಜೆಪಿ ಮುಖಂಡ ನಿನ್ನೆ ಬಲಿಯಾಗಿದ್ದಾರೆ. ಬಿಜೆಪಿ ಎಸ್.ಸಿ/ಎಸ್.ಟಿ ಮೊರ್ಚಾದ ಉಪಾಧ್ಯಕ್ಷ ಹರೀಶ್ ಅವರ ಹತ್ಯೆಯನ್ನು ತೀವ್ರವಾಗಿ ಖಂಡಿಸಿ ಸರ್ಕಾರ ಕೂಡಲೆ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ. ನಂತರ ಗಾಜಿಪೂರ ಬಡಾವಣೆಯಲ್ಲಿ ವಾಲ್ಮೀಕಿ ಮಂದಿರದಲ್ಲಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದೆ. ಅಲ್ಲಿನ ದಲಿತ ಮುಖಂಡರೊಡನೆ ಚರ್ಚೆ ನಡೆಸಿ ಅವರ ಕುಂದು ಕೊರತೆಗಳನ್ನು ಆಲಿಸಿದೆ. ಅಲ್ಲಿಂದ ರಾಜೀವ್ ಗಾಂಧಿ ಬಡಾವಣೆಯಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸ್ಥಳೀಯ ಮುಖಂಡರೊಡನೆ ಸಂವಾದ ನಡೆಸಿದೆ. ನಂತರ ಪಂಡಿತ ರಂಗಮಂದಿರದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಜನರ ಆಶೋತ್ತರಗಳಿಗೆ ಪೂರಕವಾಗಿ ಸಂಘಟಿತರಾಗಿ ಕೆಲಸ ಮಾಡುವಂತೆ ಕರೆ ನೀಡಿದೆ.
Comments