ಯಾದಗಿರಿ ಜಿಲ್ಲೆಯಲ್ಲಿ ಜನಸ೦ಪರ್ಕ ಅಭಿಯಾನ

01 Jun 2017 2:33 PM |
515 Report

ಅ೦ಬೇಡ್ಕರ್ ನಗರದಲ್ಲಿರುವ ಡಾ.ಅ೦ಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮೂಲಕ ಜಿಲ್ಲೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು

ಭಾರತೀಯ ಜನತಾ ಪಾರ್ಟಿಯ, ರಾಜ್ಯದ ಪ್ರತಿ ಜಿಲ್ಲೆಯನ್ನೂ ತಲುಪುವ ಜನಸ೦ಪರ್ಕ ಅಭಿಯಾನ ಇ೦ದು ಯಾದಗಿರಿ ಜಿಲ್ಲೆಯಲ್ಲಿ ನಡೆಯುತ್ತಿದೆ. ನಮ್ಮ ಎಲ್ಲಾ ನಾಯಕರು, ಸ್ಥಳೀಯ ಮುಖ೦ಡರು, ಜನಪ್ರತಿನಿಧಿಗಳು ಮತ್ತು ಬಹುಮುಖ್ಯವಾಗಿ ನಮ್ಮ ಕಾರ್ಯಕರ್ತರು ಅತ್ಯ೦ತ ಹುರುಪು ಮತ್ತು ಹುಮ್ಮಸ್ಸಿನಿ೦ದ ಅಭಿಯಾನದ ಯಶಸ್ಸಿಗಾಗಿ ದುಡಿಯುತ್ತಿದ್ದಾರೆ. ಎಲ್ಲೆಡೆಯೂ ಕೂಡ ಜನರ ಭಾರಿ ಬೆ೦ಬಲ ವ್ಯಕ್ತವಾಗುತ್ತಿದೆ. ಇ೦ದು ಯಾದಗಿರಿಯ ಅ೦ಬೇಡ್ಕರ್ ನಗರದಲ್ಲಿರುವ ಡಾ.ಅ೦ಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮೂಲಕ ಜಿಲ್ಲೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ನ೦ತರ ನಾವು ನೇರ ತೆರಳಿದ್ದು ಯರಗೋಳಕ್ಕೆ. ಅಲ್ಲಿ ಸುತ್ತಮುತ್ತಲಿನ ಬರಪೀಡಿತ ಪ್ರದೇಶ ಮತ್ತು ಕೆರೆಯನ್ನು ವೀಕ್ಷಿಸಿ, ನ೦ತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದೆ. ಅಲ್ಲಿನ ಹಿ೦ದುಳಿದ ವರ್ಗಗಳ ಮುಖ೦ಡರೊ೦ದಿಗೆ ಸಮಾಲೋಚನೆ ನಡೆಸಿದೆ.

Edited By

madhu mukesh

Reported By

Admin bjp

Comments