ಹೆಚ್ಡಿಕೆಗಾಗಿ ಮದುವೆಯನ್ನೇ ನಿಲ್ಲಿಸಿದ್ದ: 2 ವರ್ಷಗಳ ಬಳಿಕ ಕೊನೆಗೂ ಮದುವೆಯಾದ ಅಭಿಮಾನಿ
ಈ ವಿಶೇಷ ಘಟನೆಗೆ ಸಾಕ್ಷಿಯಾಗಿದ್ದು ಬೀಳಗಿ ತಾಲೂಕಿನ ತೆಗ್ಗಿ ಗ್ರಾಮ
ಕುಮಾರಸ್ವಾಮಿ ಆಗಮಿಸುವವರೆಗೂ ಮದುವೆ ಆಗುವುದಿಲ್ಲ ಎಂದು ಪಟ್ಟು ಹಿಡಿದಿದ್ದ ವಿಕಲಚೇತನನೋರ್ವ ಕೊನೆಗೂ ಇಂದು ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ಹಸೆಮಣೆ ಏರಿದ್ದಾನೆ.
ಗ್ರಾಮದ ವಿಕಲಚೇತನ ಶ್ರೀಶೈಲ ಲಮಾಣಿ ಕುಮಾರಸ್ವಾಮಿಯವರ ಅಪ್ಪಟ ಅಭಿಮಾನಿ. ಅವರ ಸಮ್ಮುಖದಲ್ಲಿಯೇ ವಿವಾಹವಾಗುವುದಾಗಿ ಈತ ಕನಸು ಕಂಡಿದ್ದ. ಈತನ ಬಯಕೆ ಈಡೇರಬೇಕಾದರೆ ಎರಡು ವರ್ಷಗಳೆ ಕಳೆಯಬೇಕಾಯಿತು.
ಕೊನೆಗೂ ಇಂದು ಈತನ ಅಭಿಮಾನಕ್ಕೆ ಮೆಚ್ಚಿದ ಕುಮಾರಸ್ವಾಮಿಯವರು ಇವರ ಮನೆಗೆ ಆಗಮಿಸಿದ್ದರು. ಇವರ ಸಮ್ಮುಖದಲ್ಲಿಯ ಶ್ರೀಮತಿ ಶಾರಾದಾ ಎಂಬುವವಳನ್ನು ಮದುವೆ ಆಗುವ ಮೂಲಕ ತನ್ನ ಬಯಕೆ ಈಡೇರಿಸಿಕೊಂಡಿದ್ದಾನೆ.
Comments