ಪ್ರಧಾನಿ ಮೋದಿ: 44 ಕೋಟಿ ಜನರಿಗೆ ಮನೆ, ಎಲ್ಪಿಜಿ, ನೀರು, ವಿದ್ಯುತ್ ಸಂಪರ್ಕ
ಕೇಂದ್ರ ಸರ್ಕಾರ ಹಲವು ಜನ ಕಲ್ಯಾಣ ಯೋಜನೆಗಳನ್ನು ಘೋಶಣೆ
ದೇಶದಾದ್ಯಂತ ಸಾಮಾಜಿಕ ಕ್ಷೇಮಾಭಿವೃದ್ಧಿ ಯೋಜನೆಗಳನ್ನು ಜಾರಿ ತರುವ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ಮನೆಮಾತಾಗಿದ್ದಾರೆ. ಕೇಂದ್ರ ಸರ್ಕಾರ ಹಲವು ಜನ ಕಲ್ಯಾಣ ಯೋಜನೆಗಳನ್ನು ಘೋಷಿಸಿ ಆ ಮೂಲಕ ಕಾರ್ಯರೂಪದಲ್ಲಿ ತೊಡಗಿಸಿಕೊಂಡಿದೆ. ಬಡವರಿಗೆ, ಕೆಳ ಮಧ್ಯಮ ವರ್ಗದವರಿಗೆ, ಹಿಂದುಳಿದವರಿಗೆ, ಪ. ಪಂಗಡ, ಪ. ಜಾತಿ ಹೀಗೆ ಎಲ್ಲ ವರ್ಗದ 44 ಕೋಟಿ ಜನರಿಗೆ ಮನೆ ಸೌಲಭ್ಯ, ವಿದ್ಯುತ್, ನೀರು, ಎಲ್ಪಿಜಿ ಸಂಪರ್ಕ ಸೇರಿದಂತೆ ಹಲವಾರು ಯೋಜನೆಗಳ ಸೌಲಭ್ಯ ನೀಡಲು ಮುಂದಾಗಿದೆ.
ಪ್ರಧಾನಮಂತ್ರಿ ಅವಾಸ್ ಯೋಜನೆ ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ನೇರವಾಗಿ ರೂ. 1.30 ಲಕ್ಷದಿಂದ 1.50 ಲಕ್ಷಗಳವರೆಗೆ ಗುಡ್ಡಗಾಡು ಮತ್ತು ಮೈದಾನದಂತಹ ಪ್ರದೇಶಗಳಲ್ಲಿ ವಾಸವಾಗಿರುವ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಿದೆ ಎಂದು ಗ್ರಾಮೀಣ ಅಭಿವೃದ್ಧಿ ಕಾರ್ಯದರ್ಶಿ ಅಮರಜೀತ್ ಸಿನ್ಹಾ ಹೇಳಿದ್ದಾರೆ.
ಶೌಚಾಲಯ ನಿರ್ಮಾಣಕ್ಕಾಗಿ 12 ಸಾವಿರ ಅರ್ಹ ಫಲಾನುಭವಿಗಳಿಗೆ ಶೌಚಾಲಯ ನಿರ್ಮಾಣಕ್ಕಾಗಿ ಹೆಚ್ಚುವರಿ ರೂ. 12,000 ನೀಡಲಾಗುತ್ತದೆ. ಶೌಚಾಲಯ ಸೌಲಭ್ಯವನ್ನು ಈಗಾಗಲೇ ಸಂಬಂಧಿಸಿದ ಪಂಚಾಯಿತಿಗಳ ಮೂಲಕ ಒದಗಿಸಲಾಗುತ್ತಿದೆ.
ನರೇಗಾ ಯೋಜನೆಯಲ್ಲಿ ಉದ್ಯೋಗ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ 90 ದಿನಗಳ ಉದ್ಯೋಗವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಸ್ವಂತ ಮನೆ ನಿರ್ಮಾಣ ಮಾಡಲು ಬಯಸುವ ಫಲಾನುಭವಿಗಳಿಗೆ ಮನರೇಗಾ ಅಡಿಯಲ್ಲಿ ಉದ್ಯೋಗ ಮಾಡಿ ರೂ. 18,000 ಗಳಿಸಿ ಮನೆ ಕಟ್ಟುವ ಕನಸನ್ನು ಸಾಕಾರಗೊಳಿಸಬಹುದು.
Comments