ಸಿದ್ದರಾಮಯ್ಯ ನನಗೆ ಇಷ್ಟವಾಗುವದು ಬಡವರ ಸಮಸ್ಯೆಗಳಿಗೆ ಸ್ಪಂದಿಸುವ ತಾಯಿ ಕರುಳಿನ ಕಾಳಜಿ ಹೊಂದಿರುವ ಕಾರಣಕ್ಕಾಗಿ.
ಬಡವರ ಕಷ್ಟ ಆಲಿಸಿ ಕಣ್ಣೀರು ಹಾಕಿ , ಮಹಿಳೆಯ ಸಮಸ್ಯೆ ಪರಿಹಾರಕ್ಕಾಗಿ ಅಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿ
ಸಿದ್ದರಾಮಯ್ಯ ನನಗೆ ಇಷ್ಟವಾಗುವದು ಬಡವರ ಸಮಸ್ಯೆಗಳಿಗೆ ಸ್ಪಂದಿಸುವ ತಾಯಿ ಕರುಳಿನ ಕಾಳಜಿ ಹೊಂದಿರುವ ಕಾರಣಕ್ಕಾಗಿ.
ಒಬ್ಬ ಬಡ ಮಹಿಳೆ ಮುಖ್ಯಮಂತ್ರಿಯವರ ಭೇಟಿಗಾಗಿ ನವದೆಹಲಿಗೆ ಹೋಗಿ ಮನವಿ ಪತ್ರ ಕೊಟ್ಟು ತನ್ನ ಅಳಲು ತೋಡಿಕೊಂಡಾಗ , ಆ ಮಹಿಳೆ ಪಡಿಪಾಟಲು ಆಲಿಸಿ ದುಃಖ ತಡೆದುಕೊಳ್ಳಲಾಗದೇ ಕಣ್ಣೀರು ಸುರಿಸುವ ಮೂಲಕ ತಾವೊಬ್ಬ ಬಡ ಜನರ ಬಗ್ಗೆ ತಾಯಿಯ ಕರುಳಿನ ಕಾಳಜಿ ಇರುವ ಮಾನವತಾವಾದಿ ಮುಖ್ಯಮಂತ್ರಿ ಎಂಬುವದನ್ನು ಸಾಬೀತು ಮಾಡಿದ್ದಾರೆ. ಬಡವರು ಮುಖ್ಯಮಂತ್ರಿಯನ್ನು ಭೇಟಿಯಾಗುವ ಮುಂಚೆ ಸೋಪು ಮತ್ತು ಶಾಂಪ್ಯೂ ಹಾಕಿ ಸ್ನಾನ ಮಾಡಿ ಸುಗಂಧ ದ್ರವ್ಯ ಪೂಸಿಸಿಕೊಂಡು ಬರಬೇಕೆಂದು ಫರ್ಮಾನು ಹೊರಡಿಸುವ ಇಂತಹ ಸಂದರ್ಭದಲ್ಲಿ ,
ಬಡವರ ಕಷ್ಟ ಆಲಿಸಿ ಕಣ್ಣೀರು ಹಾಕಿ , ಮಹಿಳೆಯ ಸಮಸ್ಯೆ ಪರಿಹಾರಕ್ಕಾಗಿ ಅಧಿಕಾರಿಗಳಿಗೆ ಸೂಚಿಸಿದ ನಂತರ ಆ ಮಹಿಳೆಗೆ ಊಟ ಉಪಚಾರ ಮಾಡಿಸಿ ಮಾನವೀಯತೆ ಮೆರೆದ ಮುಖ್ಯಮಂತ್ರಿ ದೇಶದಲ್ಲಿ ಇನ್ನೊಬ್ಬರಿಲ್ಲ.
ಇಂತಹ ಮಾನವೀಯ ಮೌಲ್ಯಗಳನ್ನು ತುಂಬಿಕೊಂಡು ಬಡವರ ಸೇವೆಗಾಗಿ ಹಗಲಿರುಳು ಶ್ರಮವಹಿಸುತ್ತಿರುವ ಅಪರೂಪದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕಂಡರೆ ನನಗೆ ತುಂಬ ಅಭಿಮಾನ.
ಆದ್ದರಿಂದಲೇ ನಾನು ಬಯಸುವದು ಸಿದ್ದರಾಮಯ್ಯನವರು ಇನ್ನೂ ಹತ್ತಾರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೆಂದು.
Comments