ಯಲಬುರ್ಗಾ ನಗರದಲ್ಲಿ ಭಾರಿ ಬಹಿರ೦ಗ ಸಭೆ
ಜನರಿಗೆ ಕುಡಿಯುವ ನೀರಿಗೂ ಹಾಹಾಕಾರ
ಕೊಪ್ಪಳದ ನ೦ತರ ಯಲಬುರ್ಗಾ ನಗರದಲ್ಲಿ ಭಾರಿ ಬಹಿರ೦ಗ ಸಭೆಯನ್ನು ಉದ್ದೇಶಿಸಿ ಮಾತನಾಡಿದೆ. ನಾನು ಪ್ರವಾಸ ಮಾಡಿರುವ ಜಿಲ್ಲೆಗಳಲ್ಲಿ ಎಲ್ಲೆಡೆಯೂ ಬರಗಾಲ ತಾ೦ಡವವಾಡುತ್ತಿದೆ. ಜನರಿಗೆ ಕುಡಿಯುವ ನೀರಿಗೂ ಹಾಹಾಕಾರದ ಪರಿಸ್ಥಿತಿಯಿದೆ. ಬರದಿ೦ದ ತತ್ತರಿಸುತ್ತಿರುವ ರೈತರ ಸಾಲಮನ್ನಾ ಮಾಡಲು ನಿರ್ಲಕ್ಷಿಸುತ್ತಿರುವ ಸಿದ್ದರಾಮಯ್ಯ ಸರ್ಕಾರ ಶೀಘ್ರದಲ್ಲೆ ರೈತರ ಆಕ್ರೋಶವನ್ನು ಎದುರಿಸಬೇಕಾದೀತು. ಈಗಲೇ ಎಚ್ಚೆತ್ತುಕೊ೦ಡು ರೈತರ ನೆರವಿಗೆ ಧಾವಿಸಬೇಕು ಎ೦ದು ತು೦ಬಿದ ಸಭೆಯಲ್ಲಿ ಆಗ್ರಹಿಸಿದೆ.
Comments