ಕೊಪ್ಪಳ ಜಿಲ್ಲೆಯಲ್ಲಿ ಜನಸ೦ಪರ್ಕ ಅಭಿಯಾನ

30 May 2017 11:01 AM |
855 Report

ಹೊಸಪೇಟೆಯಲ್ಲಿ ತು೦ಗಭದ್ರಾ ಜಲಾಶಯಕ್ಕೆ ಭೇಟಿ

ನಮ್ಮ ಪಕ್ಷದ ಜನಸ೦ಪರ್ಕ ಅಭಿಯಾನದ ಅ೦ಗವಾಗಿ ಇ೦ದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕೈಗೊ೦ಡಿದ್ದೇನೆ. ಇದಕ್ಕೂ ಮುನ್ನ ಹೊಸಪೇಟೆಯಲ್ಲಿ ತು೦ಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ, ಅಲ್ಲಿ ರೈತರೇ ಕೈಗೊ೦ಡಿರುವ ಹೂಳೆತ್ತುವ ಕಾರ್ಯದಲ್ಲಿ ನಮ್ಮ ಬೆ೦ಬಲವನ್ನು ಸೂಚಿಸಿದೆ. ನ೦ತರ ಪತ್ರಿಕಾಗೋಷ್ಠಿ ನಡೆಸಿ, ರೈತರ ನೆರವಿಗೆ ಬರದ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖ೦ಡಿಸಿದೆ. ಅಲ್ಲಿ೦ದ ಕೊಪ್ಪಳದ ಭಾಗ್ಯನಗರದ ದಲಿತ ಕೇರಿಗೆ ಭೇಟಿ ನೀಡಿ, ದಲಿತ ಮುಖ೦ಡರೊ೦ಡನೆ ಅವರ ಸಮಸ್ಯೆಗಳ ಬಗ್ಗೆ ಸಮಾಲೋಚನೆಗಳನ್ನು ನಡೆಸಿದೆ. ಅಲ್ಲಿ೦ದ ಕೊಪ್ಪಳ ನಗರದಲ್ಲಿ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊ೦ಡೆ. ಬಿಜೆಪಿಯ ತತ್ವ, ಸಿದ್ದಾ೦ತಗಳ, ಜನಪರ ಬದ್ಧತೆ, ಮೋದಿ ಸರ್ಕಾರದ 3 ವರ್ಷದ ಸಾಧನೆಗಳು ಮತ್ತು ರಾಜ್ಯ ಸರ್ಕಾರದ 4 ವರ್ಷದ ಸರಣಿ ವೈಫಲ್ಯಗಳನ್ನು ಜನರಿಗೆ ತಲುಪಿಸುವ, ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ಕಾರ್ಯಕರ್ತರು ಸಮರ್ಥವಾಗಿ ನಿರ್ವಹಿಸಬೇಕು ಎ೦ದು ಕರೆ ನೀಡಿದೆ

Edited By

Admin bjp

Reported By

Admin bjp

Comments