ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಿಂದ 80 ಹಾಸಿಗೆಗಳ ಸಾಮಥ್ರ್ಯದ ನವೀಕರಿಸಿದ ವಿ.ಟಿ.ಎಸ್.ಎಂ. ಫೆರಿಫರೆಲ್ ಕ್ಯಾನ್ಸರ್ ಕೇಂದ್ರದ ಹಾಗೂ ಲಿನಿಯರ್ ಎಕ್ಸೆಲರೇಟರ್ ಯಂತ್ರದ ಲೋಕಾರ್ಪಣೆ
ರಾಜ್ಯ ಸರ್ಕಾರ ಡಾ. ನಂಜುಂಡಪ್ಪ ವರದಿಯನ್ವಯ ಗುರುತಿಸಿದ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿರುವ ಅತ್ಯಂತ ಹಿಂದುಳಿದ ತಾಲೂಕುಗಳು ಸೇರಿದಂತೆ ಒಟ್ಟು 114 ತಾಲೂಕುಗಳ ಹಾಗೂ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ವಿಶೇಷ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಒದಗಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಸರ್ಕಾರ ಬದ್ಧವಾಗಿದ್ದು,ಅವರು ಶನಿವಾರ ಕಲಬುರಗಿಯಲ್ಲಿ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಬೋಧನಾ ಆಸ್ಪತ್ರೆ ಕಟ್ಟಡದ ಹಿಂಭಾಗದಲ್ಲಿ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಿಂದ 80 ಹಾಸಿಗೆಗಳ ಸಾಮಥ್ರ್ಯದ ನವೀಕರಿಸಿದ ವಿ.ಟಿ.ಎಸ್.ಎಂ. ಫೆರಿಫರೆಲ್ ಕ್ಯಾನ್ಸರ್ ಕೇಂದ್ರದ ಹಾಗೂ ಲಿನಿಯರ್ ಎಕ್ಸೆಲರೇಟರ್ ಯಂತ್ರದ ಲೋಕಾರ್ಪಣೆ ಮತ್ತು ಇನ್ಫೋಸಿಸ್ ಫೌಂಡೇಶನ್‍ದಿಂದ ದೇಣಿಗೆಯಾಗಿ ನೀಡುತ್ತಿರುವ ಧರ್ಮಶಾಲೆಯ ಶಿಲ್ಯಾನಾಸ ನೆರವೇರಿಸಿ, ರಾಜ್ಯದ ಎಲ್ಲ ಪ್ರದೇಶ, ಜಾತಿ ಜನಾಂಗಕ್ಕೂ ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಕಲ್ಪಿಸಬೇಕೆಂಬುದೇ ಸರ್ಕಾರದ ಪ್ರಮುಖ ಧ್ಯೇಯವಾಗಿದೆ ಎಂದರು.
ಹೈದ್ರಾಬಾದ್ ಕರ್ನಾಟಕ ಪ್ರದೇಶ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿರುವ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದ ಅಸಮಾನತೆ ಹಾಗೂ ತಾರತಮ್ಯ ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಗಮನ ನೀಡಲಿದೆ. ರಾಜ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಾಗೂ ಪದವಿಪೂರ್ವ ಕಾಲೇಜುಗಳನ್ನು ಮಂಜೂರು ಮಾಡುವಾಗ ಈ ಭಾಗಕ್ಕೆ ಪ್ರಥಮಾಧ್ಯತೆ ನೀಡಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ ಪ್ರಯತ್ನಿಸಲಾಗುವುದು. ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರಸಕ್ತ ಸಾಲಿನ 1500 ಕೋಟಿ ರೂ. ಸೇರಿದಂತೆ ಈವರೆಗೆ ಒಟ್ಟು 4500 ಕೋಟಿ ರೂ. ಅನುದಾನ ಒದಗಿಸಿದ್ದು, ಈ ಭಾಗದಲ್ಲಿನ ಅತ್ಯಂತ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೂ ವಿಶೇಷ ಅನುದಾನ ನೀಡಲಾಗುತ್ತಿದೆ ಎಂದು ನುಡಿದರು.
ಕ್ಯಾನ್ಸರ್ ಎಂದರೆ ಭಯಪಡುವ ರೋಗವಲ್ಲ. ಈಗ ಈ ರೋಗದ ಬಗ್ಗೆ ಅನೇಕ ಸಂಶೋಧನೆಗಳು ನಡೆದಿದ್ದÀಲ್ಲದೇ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳು ಲಭ್ಯವಿರುವುದರಿಂದ ಇದನ್ನು ಮುಂಚಿತವಾಗಿಯೇ ಗುರುತಿಸಿ ಚಿಕಿತ್ಸೆ ನೀಡಿದರೆ ಸಂಪೂರ್ಣವಾಗಿ ಗುಣಪಡಿಸಬಹುದು. ಸದ್ಯಕ್ಕೆ ಶೇ. 8ರಷ್ಟು ಕ್ಯಾನ್ಸರ್ ಬೆಳವಣಿಗೆ ಕಂಡು ಬಂದಿದೆ. ವಿಶೇಷವಾಗಿ ತಂಬಾಕು ಸೇವನೆಯ ಪ್ರತಿ 5 ಜನರಲ್ಲಿ ಒಬ್ಬರು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇದಕ್ಕೆಲ್ಲ ಆಹಾರ ಮತ್ತು ಜೀವನ ಪದ್ಧತಿಗಳು ಮೂಲ ಕಾರಣವಾಗಿದ್ದು, ಜನರಲ್ಲಿ ಹೆಚ್ಚಿನ ಜಾಗೃತಿ ಬರಬೇಕಾಗಿದೆ. “ಶೀಘ್ರ ಪತ್ತೆ, ಕ್ಯಾನ್ಸರ್ ನಾಪತ್ತೆ” ಎಂಬ ಘೋಷ ವಾಕ್ಯದ ಪ್ರಚಾರವನ್ನು ಈ ಭಾಗದ ಎಲ್ಲ
ಜಿಲ್ಲೆಗಳಲ್ಲಿ ವಿಶೇಷ ಅಭಿಯಾನದ ಮೂಲಕ ಕೈಗೊಳ್ಳಬೇಕು. ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿರುವ ಎಲ್ಲ ಅತ್ಯಾಧುನಿಕ ಚಿಕಿತ್ಸೆ ಸೌಲಭ್ಯಗಳು ಕಲಬುರಗಿಯಲ್ಲಿ ಇಂದು ಲೋಕಾರ್ಪಣೆ ಮಾಡಿದ ಕ್ಯಾನ್ಸರ್ ಆಸ್ಪತ್ರೆಯಲ್ಲಿಯೂ ಲಭ್ಯವಿದ್ದು, ಈ ಭಾಗದ ಜನರು ಇದರ ಪ್ರಯೋಜನ ಪಡೆಯಬೇಕು. ಕಲಬುರಗಿಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಇನ್ಫೋಸಿಸ್ ಸಂಸ್ಥೆಯಿಂದ ಪ್ರಾರಂಭಿಸಲಾದ ಧರ್ಮಶಾಲೆಗೆ ಹೆಚ್ಚಿನ ಅನುದಾನ ಒದಗಿಸಬೇಕೆಂದರು.
ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿರುವ ತಾರತಮ್ಯವನ್ನು ಸರಿಪಡಿಸಲು ಸರ್ಕಾರ ವಿಶೇಷ ಗಮನ ಹರಿಸಬೇಕು. ಮೈಸೂರು ಭಾಗದಲ್ಲಿ ಪ್ರತಿ 15000 ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೆ ಜನಸಂಖ್ಯೆಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಪ್ರತಿ 20000 ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಅದೇ ರೀತಿ ಈ ಭಾಗದಲ್ಲಿ ಪದವಿಪೂರ್ವ ಕಾಲೇಜುಗಳ ಸಂಖ್ಯೆಯೂ ಕಡಿಮೆಯಿದೆ. ಇದನ್ನು ಸರಿಪಡಿಸಲು ಮುಖ್ಯಮಂತ್ರಿಗಳು ವಿಶೇಷ ಗಮನ ಹರಿಸಬೇಕೆಂದರು.
ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಮಾತನಾಡಿ, ಕಲಬುರಗಿ ನಗರದಲ್ಲಿ 80 ಹಾಸಿಗೆಗಳ ಪೂರ್ಣ ಪ್ರಮಾಣದ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ನವೀಕೃತ ಹಾಗೂ ಮೇಲ್ದರ್ಜೆಗೇರಿಸಿದ ವಿ.ಟಿ.ಎಸ್.ಎಂ. ಫೆರಿಫರಲ್ ಕ್ಯಾನ್ಸರ್ ಕೇಂದ್ರವನ್ನು 50 ಕೋಟಿ ರೂ. ವೆಚ್ಚದಿಂದ ಎರಡು ಹಂತಗಳಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ಈ ಕೇಂದ್ರದಲ್ಲಿ ಎಲ್ಲ ತರಹÀದ ಕ್ಯಾನ್ಸರ್ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಿ.ಪಿ.ಎಲ್. ಕುಟುಂಬಗಳಿಗೆ ಉಚಿತ ಚಿಕಿತ್ಸೆ ಹಾಗೂ ಎಪಿಎಲ್ ಕುಟುಂಬಗಳಿಗೆ ಶೇ. 70 ರಷ್ಟು ಮತ್ತು ಕಡಿಮೆ ಆದಾಯ ಹೊಂದಿದ ಕುಟುಂಬಗಳಿಗೆ ಶೇ. 50ರಷ್ಟು ರಿಯಾಯಿತಿಯಲ್ಲಿ ಚಿಕಿತ್ಸೆ ನೀಡಲಾಗುವುದು. ಇದರಿಂದ ಈ ಭಾಗದ ಆರು ಜಿಲ್ಲೆಗಳ ಹಾಗೂ ನೆರೆಯ ರಾಜ್ಯಗಳ ಬಡ ಕ್ಯಾನ್ಸರ್ ಹೊರ ರೋಗಿಗಳು ಅತ್ಯಾಧುನಿಕ ಚಿಕಿತ್ಸೆ ಪಡೆಯಲು ಅನುಕೂಲವಾಗಿದೆ. ಕಲಬುರಗಿ ನಗರದಲ್ಲಿ ಕಳೆದ ವರ್ಷ ಪ್ರಾರಂಭಿಸಲಾದ ಜಯದೇವ ಹೃದ್ರೋಗ ಆಸ್ಪತ್ರೆಯ ಶಾಖೆಯಲ್ಲಿ ಈವರೆಗೆ 30000 ಹೃದ್ರೋಗಿಗಳಿಗೆ ಓಪಿಡಿ ಮತ್ತು 3200 ರೋಗಿಗಳಿಗೆ ಒಳರೋಗಿ ಚಿಕಿತ್ಸೆ ನೀಡಲಾಗಿದೆ. ಇದಲ್ಲದೇ 15000 ಜನರ ಇ.ಸಿ.ಜಿ. ತಪಾಸಣೆ ಮಾಡಲಾಗಿದೆಯಲ್ಲದೇ 50 ಜನರ ಓಪನ್ ಹಾರ್ಟ್ ಸರ್ಜರಿ ಮಾಡಲಾಗಿದೆ. ಇದೇ ಮಾದರಿಯಲ್ಲಿ ಕ್ಯಾನ್ಸರ್ ಆಸ್ಪತ್ರೆಯು ಸಹ ಜನಸ್ನೇಹಿಯಾಗಿ ಬೆಳವಣಿಗೆಯಾಗಲಿ. ರಾಜ್ಯ ಸರ್ಕಾರವು ಮೈಸೂರು ಮತ್ತು ಕಲಬುರಗಿಗಳಲ್ಲಿ ಟ್ರಾಮಾ ಸೆಂಟರ್ ಮಂಜೂರು ಮಾಡಿದ್ದು, ಬರುವ 6 ತಿಂಗಳೊಳಗೆ ಕಲಬುರಗಿಯಲ್ಲಿ ಟ್ರಾಮಾ ಸೆಂಟರ್ ಕಾರ್ಯ ಪ್ರಾರಂಭವಾಗಲಿದೆ. ಮೈಸೂರು, ಕಲಬುರಗಿ ಮತ್ತು ಬೆಳಗಾವಿಗಳಲ್ಲಿ ರಾಜ್ಯ ಸರ್ಕಾರ ಸೂಪರ್ ಸ್ಪೆಶಾಲಿಟಿ ಹಾಸ
Comments