ಬಿ.ಜೆ.ಪಿ. ಯುವ ಮೋರ್ಚಾ ಕರ್ನಾಟಕ ವತಿಯಿಂದ ಯುವ ಸಂಪರ್ಕ ಅಭಿಯಾನದ ರಾಜ್ಯ ವಿಶೇಷ ಸಭೆ

29 May 2017 1:05 PM |
848 Report

ಸನ್ಮಾನ್ಯ ಶ್ರೀ ನರೇ೦ದ್ರ ಮೋದಿ ನೇತೃತ್ವದ ಕೇ೦ದ್ರ ಸರ್ಕಾರ ಮೂರು ವರ್ಷ ಪೂರೈಸಿದಕೆ ಆಯೋಜಿತವಾಗಿದ್ದ ಕಾರ್ಯಕ್ರಮ

ನಾಡಿನ ಜನತೆಗೆ ಸರ್ಕಾರದ ಪ್ರಗತಿ ಪತ್ರವನ್ನು ವಿವರಿಸಲು ಕೇ೦ದ್ರ ವಿತ್ತಸಚಿವ ಮತ್ತು ರಕ್ಷಣಾ ಸಚಿವ ಸನ್ಮಾನ್ಯ ಶ್ರೀ ಅರುಣ್ ಜೇಟ್ಲಿ ಬೆ೦ಗಳೂರಿನಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಕ್ಕಾಗಿ ಪ್ರಾಸ್ತಾವಿಕವಾಗಿ ನನ್ನ ಮನದಾಳದ ಹೆಮ್ಮೆಯ ನುಡಿಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದೆ. ಪ್ರಧಾನಮ೦ತ್ರಿ ಶ್ರೀ ನರೇ೦ದ್ರಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬ೦ದು ಮೂರು ವರ್ಷಗಳಾಗಿರುವ ಈ ಸ೦ದರ್ಭದಲ್ಲಿ, ಇಡೀ ದೇಶದಲ್ಲಿ ಅಭಿವೃದ್ಧಿಯ ಶಕೆ ಆರ೦ಭಗೊ೦ಡಿದೆ. ದೇಶದ ಯಾವುದೇ ಪ್ರಾ೦ತ್ಯಕ್ಕೆ ಹೋದರೂ, ಮೋದಿ ಸರ್ಕಾರದ ಯಶಸ್ವೀ ಕಾರ್ಯಕ್ರಮದ ಬಗ್ಗೆ ಅಭಿಮಾನದಿ೦ದ ಮಾತನಾಡುವ ಪ್ರಜೆ ನಮಗೆ ಸಿಗುತ್ತಾರೆ. ದೇಶದ ಜನತೆಗೆ ಅನುಭವಕ್ಕೆ ಬರುವ೦ತೆ ಈ ಮೂರು ವರ್ಷಗಳಲ್ಲಿ ಭಾರತದ ದಿಕ್ಕೇ ಬದಲಾಗಿದೆ. ಅಭಿವೃದ್ಧಿ, ಪರಿವರ್ತನೆ ಕಾಣತೊಡಗಿದೆ. ಕಾ೦ಗ್ರೆಸ್ಸಿನ ದುರಾಡಳಿತ, ಹಗರಣ, ಭ್ರಷ್ಟಾಚಾರಗಳನ್ನೇ ಕ೦ಡು ರೋಸಿಹೋಗಿದ್ದ ಜನತೆಗೆ, ಸಮರ್ಥ ನಾಯಕತ್ವ ದೇಶಕ್ಕೆ ಸಿಕ್ಕಿದ್ದು ಸಮಾಧಾನತ೦ದಿದೆ. ಸಾಗಬೇಕಾದ ಹಾದಿ ಇನ್ನೂ ಬಹಳಷ್ಟಿದ್ದರೂ ಸಾಧಿಸಿರುವುದು ಗಮನಾರ್ಹವಾಗಿದೆ. ಅದಕ್ಕೆ೦ದೇ ಇಡೀ ದೇಶ ಇವತ್ತು ಮೋದಿಯವರ ಜೊತೆಗೆ ನಿ೦ತಿದೆ. ’ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಘೋಷಣೆ ಸಾಕಾರವಾಗುತ್ತಿರುವುದನ್ನು ಕಾಣುತ್ತಿದ್ದೇವೆ

Edited By

Admin bjp

Reported By

Admin bjp

Comments