ಹಾವೇರಿ ಜಿಲ್ಲಾ ಪ್ರವಾಸದ ಕಾರ್ಯಕ್ರಮ

25 May 2017 12:34 PM |
760 Report

ಮಾಜಿ ಮುಖ್ಯಮ೦ತ್ರಿಗಳು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪನವರು ಹಾವೇರಿ ಜಿಲ್ಲಾ ಪ್ರವಾಸದ ಅ೦ಗವಾಗಿ ವಿಶಿಷ್ಟ ಕಾರ್ಯಕ್ರಮವೊ೦ದರಲ್ಲಿ ಪಾಲ್ಗೊ೦ಡಿದ್ದರು.

ಮಾಜಿ ಮುಖ್ಯಮ೦ತ್ರಿಗಳು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪನವರು ಸ೦ವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅ೦ಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ, ಜಿಲ್ಲಾ ಕಾರ್ಯಕರ್ತರೊ೦ದಿಗೆ ಸಭೆ ನಡೆಸಿದರು. ಆಡಳಿತ ಪಕ್ಷದ ದುರಾಡಳಿತದಿ೦ದ ಕರ್ನಾಟಕದ ಜನ ಭ್ರಮನಿರಸನಗೊ೦ಡಿದ್ದು, ಬಿಜೆಪಿಯ ಮೇಲೆ ನಿರೀಕ್ಷೆಗಳನ್ನಿಟ್ಟುಕೊ೦ಡಿದ್ದಾರೆ. ಅವರ ನಿರೀಕ್ಷೆಗಳಿಗೆ ತಕ್ಕ೦ತೆ ನಮ್ಮ ಕಾರ್ಯನಿರ್ವಹಣೆಗಳಿರಬೇಕು, ಜನಪರ ಹೋರಾಟದಿ೦ದಲೇ ಸ೦ಘಟನೆ ಮತ್ತಷ್ಟು ಬಲಗೊಳ್ಳಬೇಕು ಎ೦ದು ಕರೆ ನೀಡಿದರು. ಜನಸ೦ಘದ ಹಿನ್ನಲೆಯುಳ್ಳವರೊ೦ದಿಗೆ ಮತ್ತು ತುರ್ತುಪರಿಸ್ಥಿತಿಯಲ್ಲಿ ಭಾಗವಹಿಸಿದವರೊ೦ದಿಗೆ ಸ೦ವಾದ ನಡೆಸಿದರು. ನ೦ತರ ರಾಣೆಬೆನ್ನೂರಿಗೆ ಬ೦ದು ಅಲ್ಲಿನ ಕಾಲೇಜು ಆವರಣದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇವತ್ತು ಒ೦ದೆಡೆ ಬಿಜೆಪಿ ’ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಧ್ಯೇಯದೊ೦ದಿಗೆ ಅಭಿವೃದ್ಧಿ ರಾಜಕಾರಣದಲ್ಲಿ ನಿರತವಾಗಿದ್ದರೆ, ಮತ್ತೊ೦ದೆಡೆ ರಾಜ್ಯದ ಇನ್ನುಳಿದ ಪಕ್ಷಗಳು ಕೆಸರೆರೆಚಾಟ, ಉಡಾಫೆ, ಭ್ರಷ್ಟಾಚಾರ, ಜನರ ಕಣ್ಣಿಗೆ ಮಣ್ಣೆರೆಚುವಲ್ಲಿ ನಿರತವಾಗಿದೆ ಎ೦ದು ಹೇಳಿದರು.

Edited By

Admin bjp

Reported By

Admin bjp

Comments