Whatsapp ಅನ್ನು ಬೇಗ update ಮಾಡಿಕೊಳ್ಳಿ..!! ನಿಮ್ಮ Whatsapp ಹ್ಯಾಕ್ ಆಗಬಹುದು..!!!
ಇತ್ತಿಚಿನ ಕಾಲದಲ್ಲಿ ವಾಟ್ಸ್ಅಪ್ ಬಳಸದೇ ಇರುವವರೆ ಇಲ್ಲ ಅನಿಸುತ್ತದೆ.. ಕೈಯಲ್ಲೊಂದು ಅಂಡ್ರ್ಯಾಯ್ಡ್ ಪೋನ್ ಇದ್ರೆ ಸಾಕು… ದಿನಪೂರ್ತಿ ಬೇಕಾದ್ರೂ ವಾಟ್ಸ್ಅಪ್ ಬಳಸುತ್ತಲೇ ಇರುತ್ತೇವೆ.. ಇದೀಗ ವಾಟ್ಸ್ ಅಫ್ ಬಳಸುವವರಿಗೆ ವಾಟ್ಸ್ ಆಪ್ ಕಂಪನಿಯೇ ಎಚ್ಚರವನ್ನು ನೀಡಿದೆ.. ಈ ಕೂಡಲೇ ನಿಮ್ಮ ವಾಟ್ಸ್ಅಪ್ ಅನ್ನು ಅಫ್ಡೇಟ್ ಮಾಡಿಕೊಳ್ಳಿ.. ಇಲ್ಲವಾದರೆ ನಿಮ್ಮ ವಾಟ್ಸ್ಅಪ್ ಹ್ಯಾಕ್ ಆಗೋದು ಗ್ಯಾರೆಂಟಿ…
ವಾಟ್ಸ್ಅಪ್ ಹ್ಯಾಕ್ ಆಗಿರುವ ಕಾರಣ Whatsapp ತನ್ನ 150 ಮಿಲಿಯನ್ ಬಳಕೆದಾರರ ಖಾತೆ ಹಾಗೂ ಮಾಹಿತಿಯನ್ನು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಖಾತೆ ಅಪ್ಡೇಟ್ ಮಾಡುವಂತೆ ವಾಟ್ಸ್ಅಪ್ ಸಂಸ್ಥೆಯು ಮನವಿಯನ್ನು ಮಾಡಿಕೊಂಡಿದೆ. ಆ್ಯಪ್ ನಲ್ಲಿರುವ ದೋಷದ ಬಗ್ಗೆ ಕಳೆದ ತಿಂಗಳಲ್ಲೇ Whatsapp ಕಂಪೆನಿಯ ಗಮನಕ್ಕೆ ಬಂದಿತ್ತು. ಕೂಡಲೇ ಎಚ್ಚೆತ್ತ ಕಂಪೆನಿ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ ಹಾಗೂ ಅಪ್ಡೇಟ್ ವರ್ಶನ್ ಬಿಡುಗಡೆಗೊಳಿಸಿದೆ. ಹಾಗಾಗಿ ನಿಮ್ಮ ವಾಟ್ಸ್ಅಪ್ ಅನ್ನು ಈ ಕೂಡಲೇ ಅಪ್ಡೇಟ್ ಮಾಡಿ. ನಿಮ್ಮ ಖಾಸಗಿ ಮಾಹಿತಿಯನ್ನು ಕೂಡ ಹ್ಯಾಕ್ ಮಾಡಬಹುದು.. ನಿಮ್ಮ ಜೀ ಮೇಲ್, ವಾಟ್ಸ್ಅಪ್, ನಾರ್ಮಲ್ ಮೆಸೆಜ್ ಎಲ್ಲವೂ ಕೂಡ ಹ್ಯಾಕ್ ಆಗಬಹುದು ..ಹಾಗಾಗಿ ಈ ಕೂಡಲೇ ನಿಮ್ಮ ವಾಟ್ಸ್ಅಪ್ ಅನ್ನು ಅಪ್ಡೇಟ್ ಮಾಡಿಕೊಳ್ಳಿ..
Comments