ಓ ಮೈ ಗಾಡ್..! ಉಚಿತವಾಗಿ ಸಿಗ್ತಿದೆ ಒನ್ ಪ್ಲಸ್ ಸ್ಮಾರ್ಟ್ಫೋನ್..!! ಅದಕ್ಕೆ ನೀವ್ ಮಾಡಬೇಕಿರೋದು ಇಷ್ಟೆ..!?

06 Feb 2019 1:37 PM | Technology
969 Report

ಸ್ಮಾರ್ಟ್ಫೋನ್ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ..ಕೈಯಲ್ಲಿ ಒಂದು ಸ್ಮಾರ್ಟ್ ಫೋನ್ ಇದ್ರೆ ನಮ್ಮ ಲುಕ್ ಮತ್ತಷ್ಟು ಹೆಚ್ಚಾಗೋದರಲ್ಲಿ ನೋಡೌಟ್…ಆದರೆ ಏನ್ ಮಾಡೋದು ಸ್ಮಾರ್ಟ್ ಫೋನ್’ಗಳ ಬೆಲೆ ಗಗನಕ್ಕೆ ಏರಿದೆ…ಚೀನಾದ ಸ್ಮಾರ್ಟ್ಫೋನ್ ಕಂಪನಿಗಳು ಹೊಸ ಫ್ಲಾನ್’ವೊಂದನ್ನು ಸಿದ್ದ ಪಡಿಸಿದೆ.. ಗ್ರಾಹಕರನ್ನು ಸೆಳೆಯಲು ಹೊಸ ಹೊಸ ವೈಶಿಷ್ಟ್ಯಗಳ ಸ್ಮಾರ್ಟ್ಫೋನ್ ಬಿಡುಗಡೆ ಮಾಡ್ತಿವೆ. ಜೊತೆಗೆ ಹೊಸ ಹೊಸ ಆಫರ್ ಗಳನ್ನು ನೀಡ್ತಿವೆ. ಈಗ ಚೀನಾದ ಸ್ಮಾರ್ಟ್ಫೋನ್ ಕಂಪನಿ ಒನ್ ಪ್ಲಸ್, ಗ್ರಾಹಕರಿಗಾಗಿ ವಿಶೇಷ ಚಾಲೆಂಜ್ ಒಂದನ್ನು ಶುರು ಮಾಡಿದೆ. ಚಾಲೆಂಜ್ ಪೂರ್ಣಗೊಳಿಸಿದ  ಗ್ರಾಹಕರಿಗೆ ಒನ್ ಪ್ಲಸ್ ಸ್ಮಾರ್ಟ್ಫೋನ್ ಉಚಿತವಾಗಿ ದೊರೆಯಲಿದೆ..

ಸದ್ಯಕ್ಕೆ ಸ್ಮಾರ್ಟ್ ಪೋನ್ ತುಂಬಾ ದುಬಾರಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎನ್ನುವವರು ಹಾಗೂ ಉಚಿತವಾಗಿ ಒನ್ ಪ್ಲಸ್ ಸ್ಮಾರ್ಟ್ಫೋನ್ ಬೇಕು ಎನ್ನುವವರು, ಒನ್ ಪ್ಲಸ್ ಆಂಡ್ರಾಯ್ಡ್ ಬೆಸ್ಟ್ ಆಪರೇಟಿಂಗ್ ಸಿಸ್ಟಂ OxygenOS ನ ಹೊಸ ಫೀಚರ್ ಡಿಸೈನ್ ಮಾಡಬೇಕು. ನಂತ್ರ ಈ ಬಗ್ಗೆ ಕಂಪನಿಗೆ ಅದನ್ನು ವಿವರಿಸಬೇಕು. ನೀವು ಮಾಡಿದ ಡಿಸೈನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸ್ಕೆಚ್ ಮೂಲಕ ನೀಡಬೇಕು. ಫೀಚರ್ ನ ಎಲ್ಲ ಮಾಹಿತಿಯನ್ನು ಕಂಪನಿಗೆ ನೀಡಬೇಕು. ಇದ್ರ ಜೊತೆಗೆ ಕಂಪನಿ ನೀಡಿದ ಪ್ರಶ್ನೆಗಳಿಗೆ ನೀವು ಉತ್ತರವನ್ನು ನೀಡಬೇಕು. ನೀವೂ ಈ ಚಾಲೆಂಜ್ ನಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿದ್ದರೆ ಫೆಬ್ರವರಿ 22ರವರೆಗೆ ಸಮಯವಕಾಶವಿದೆ.. ಚಾಲೆಂಜ್ ಬಗ್ಗೆ ಹೆಚ್ಚಿನ ಮಾಹಿತಿ ಕಂಪನಿಯ ಅಧಿಕೃತ ವೆಬ್ಸೈಟ್ ನಲ್ಲಿ ಸಿಗಲಿದೆ. ಬೇಗ ಬೇಗ ಚಾಲೆಂಜ್ ಸ್ವೀಕರಿಸಿ ಮೊಬೈಲ್ ನಿಮ್ಮದಾಗಿಸಿಕೊಳ್ಳಿ..

Edited By

Manjula M

Reported By

Manjula M

Comments