BE ALERT: 'ವಾಟ್ಸಪ್ ಗೋಲ್ಡ್’ ಬಳಸುವ ಮುನ್ನ ಎಚ್ಚರ..!!
ಇತ್ತಿಚೆಗೆ ನಮ್ಮ ಟೆಕ್ನಾಲಜಿ ತುಂಬಾನೇ ಆಗಿದೆ..ದಿನದಿಂದ ದಿನಕ್ಕೆ ಟೆಕ್ನಾಲಜಿಗಳು ತುಂಬಾನೇ ಮುಂದುವರೆಯುತ್ತಿವೆ. ಅಂಗೈಯಲ್ಲಿಯೇ ಪ್ರಪಂಚವನ್ನೆ ನೋಡುವಂತ ಟೆಕ್ನಾಲಜಿ ಬಂದಿದೆ. ಎಲ್ಲರ ಕೈಯಲ್ಲು ಮೊಬೈಲ್ ಇದ್ದೆ ಇರುತ್ತದೆ..ಅದರಲ್ಲಿ ವಾಟ್ಸಾಪ್ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಇದೀಗ ಜನಪ್ರಿಯ ಮೆಸೇಜಿಂಗ್ ಸೇವೆ ವಾಟ್ಸಪ್, WhatsApp Gold ಆವೃತ್ತಿಯನ್ನು ಬಿಡುಗಡೆ ಮಾಡಿದೆ ಎಂಬ ಸಂದೇಶ ನಿಮಗೂ ಗೊತ್ತಿರಬಹುದು.. WhatsApp Gold ಆವೃತ್ತಿಯನ್ನು ಡೌನ್‌ಲೋಡ್ ಮಾಡಿ ಫೋನ್‌ನಲ್ಲಿ ಇನ್ಸ್ಟಾಲ್ ಮಾಡಿಕೊಂಡರೆ, ಬಳಕೆದಾರರಿಗೆ ವಿಶಿಷ್ಟವಾದ ಫೀಚರ್‌ಗಳು ಲಭ್ಯವಾಗಲಿದೆ ಎಂಬ ಮಾಹಿತಿ ದೊರತಿದೆ.
ಬಳಕೆದಾರರು ಒಂದೇ ಬಾರಿ 100 ಮಂದಿಗೆ ಪೋಟೋಗಳನ್ನು ಕಳುಹಿಸಬಹುದು, ಹಾಗೂ ಕಳುಹಿಸಿದ ಸಂದೇಶಗಳನ್ನು ಯಾವಾಗಲೂ ಬೇಕಾದರೂ ಡಿಲೀಟ್ ಮಾಡಬಹುದು ಎಂಬಿತ್ಯಾದಿ ವಿಷಯಗಳನ್ನು ಪಟ್ಟಿಮಾಡಲಾಗಿರಬಹುದು....ಆದರೆ ಬಳಕೆದಾರರೇ... ಎಚ್ಚರ! ಇದೊಂದು ನಕಲಿ ಹಾಗೂ ಆಧಾರರಹಿತ ಮೆಸೇಜ್ ಆಗಿದೆ. ತಾನು ಇಂತಹ ಸೇವೆಯನ್ನು ಪರಿಚಯಿಸಿಲ್ಲವೆಂದು ವಾಟ್ಸಪ್ ಸ್ಪಷ್ಟಪಡಿಸಿದೆ. ಅಂತಹ ಸಂದೇಶಗಳು ಬಳಕೆದಾರರಿಗೆ ಹಾನಿಯನ್ನುಂಟು ಮಾಡಬಲ್ಲುವು. ಇದು ಹ್ಯಾಕರ್ಸ್ ಕೃತ್ಯವೂ ಆಗಿರಬಹುದು. ಆ ನಕಲಿ ಆ್ಯಪನ್ನು ಫೋನಿಗೆ ಇನ್ಸ್ಟಾಲ್ ಮಾಡಿಸುವ ಮೂಲಕ, ನಿಮ್ಮ ಫೋನ್‌ಗೆ ವೈರಸ್ ಹರಡುವ ಸಾಧ್ಯತೆಗಳೂ ಇವೆ ಎಂದು ತಿಳಿಸಲಾಗಿದೆ.ಹಾಗಾಗಿ ಮೊಬೈಲ್ ಅನ್ನು ಬಳಸುವಾಗ ಬಹಳ ಎಚ್ಚರಿಕೆಯಿಂದ ಬಳಸಬೇಕು.
Comments