ವಾಟ್ಸಾಪ್ ನಿಂದ ಬೀದಿ ನಾಟಕ ಪ್ರದರ್ಶನ ಪ್ರಾರಂಭ..!
ದೇಶದಲ್ಲಿ ಅತಿ ಹೆಚ್ಚು ಜನರು ಬಳಸುತ್ತಿರುವ ವಾಟ್ಸಾಪ್ ನಲ್ಲಿ ಸುಳ್ಳು ಹಾಗೂ ಪ್ರಚೋದನಾಕಾರಿ ಸಂದೇಶ ರವಾನೆಯಾಗುತ್ತಿವೆ. ಅಷ್ಟೆ ಅಲ್ಲದೆ ಅದರಿಂದ ಸಾಕಷ್ಟು ತೊಂದರೆಗಳು ಕೂಡ ಆಗುತ್ತಿವೆ.ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು, ಬೀದಿ ನಾಟಕಗಳನ್ನು ಆಯೋಜಿಸಿದ್ದು, ಇದರ ಮೊದಲ ಪ್ರದರ್ಶನ ಜೈಪುರದಲ್ಲಿ ನಡೆದಿದೆ.
ವಾಟ್ಸಾಪ್ ಲಾಂಛನ ಇರುವ ಲಾರಿಯೊಂದರಲ್ಲಿ ಐದು ಕಲಾವಿದರಿಂದ ಬೀದಿ ನಾಟಕ ಪ್ರಾರಂಭವಾಗಿದೆ. ವಾಟ್ಸಾಪ್ ನಲ್ಲಿ ಯಾವ ರೀತಿ ಸುಳ್ಳು ಸುದ್ದಿ ಹರಡುತ್ತಿದೆ, ಇದರಿಂದಾಗುವ ತೊಂದರೆ ಬಗ್ಗೆ ಒಬ್ಬ ಹೇಳಿದರೆ ಇನ್ನೊಬ್ಬ ಪಾತ್ರಧಾರಿ ಸುಳ್ಳು ಸುದ್ದಿ ಹಬ್ಬಿಸುವವರ ಬಗ್ಗೆ ಟೀಕಿಸಿ ಮಾತನಾಡಿದ್ದಾನೆ. ಮುಂದಿನ ದಿನದಲ್ಲಿ ದೇಶದ ವಿವಿಧ ಭಾಗದಲ್ಲಿ ಈ ನಾಟಕವನ್ನು ಆಯೋಜಿಸಲಾಗಿದೆ ಎಂದಿದ್ದಾರೆ.
Comments