ದುಬಾರಿ ನಷ್ಟಕ್ಕೆ ಕಾರಣವಾಯ್ತು ವಾಟ್ಸಾಪ್’ನಿಂದ ಕಳುಹಿಸಿದ ಈ ಸಂದೇಶ..!

ಟೆಕ್ನಾಲಜಿ ಎಂಬುದು ಎಷ್ಟರ ಮಟ್ಟಿಗೆ ಮುಂದುವರೆದಿದೆ ಅನ್ನೋದು ಎಲ್ಲರಿಗೂ ಕೂಡ ತಿಳಿದಿದೆ... ವಾಟ್ಸ್’ಪ್ ಕೂಡ ಈ ಟೆಕ್ನಾಲಜಿಯ ಗುಂಪಿಗೆ ಸೇರುತ್ತದೆ. ಈ ವಾಟ್ಸ್’ಪ್ ನಿಂದ ಕೆಲವೊಮ್ಮೆ ಒಳ್ಳೆಯದಾಗುವುದುಂಟು, ಇನ್ನೂ ಕೆಲವೊಮ್ಮೆ ಕೆಡಕಾಗುವುದುಂಟು.. ಒಂದೆ ಒಂದು ಮೆಸೆಜ್’ನಿಂದ ಬ್ರೇಕ್ ಆಫ್ ಆಗಿರುವುದು, ಮದುವೆ ನಿಂತಿರುವುದು ಸಾಕಷ್ಟು ಅನಾಹುತಗಳಾಗಿರುವುದು ಎಲ್ಲರಿಗೂ ತಿಳಿದೆ ಇದೆ..
ಆದರೆ ಇದೀಗ ವಾಟ್ಸಾಪ್ ನ ಒಂದೇ ಒಂದು ಫಾರ್ವಡ್ ಮೆಸೇಜ್ ನಿಂದ ಒಂದೇ ದಿನದಲ್ಲಿ ಖಾಸಗಿ ಸಂಸ್ಥೆಯ ಶೇ.71 ರಷ್ಟು ಷೇರು ಮೌಲ್ಯ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಇನ್ಫಿಭೀಮ್ ಎಂಬ ಇ-ಕಾಮರ್ಸ್ ಸಂಸ್ಥೆಯ ಷೇರು ನಷ್ಟವಾಗಿದೆ ಎಂಬುದು ತಿಳಿದು ಬಂದಿದ್ದು, ಮೂರು ತಿಂಗಳ ಹಿಂದಿನ ಮೆಸೇಜ್ ಮತ್ತೊಮ್ಮೆ ಫಾರ್ವರ್ಡ್ ಆಗಿದ್ದೇ ಈ ದುರಂತಕ್ಕೆ ಕಾರಣವಾಗಿದೆ ಎಂದು ಸಂಸ್ಥೆ ತಿಳಿಸಿದೆ. ಸುಮಾರು ಮೂರು ತಿಂಗಳ ಹಿಂದಿನ ಸಂದೇಶವನ್ನು ಮತ್ತೊಮ್ಮೆ ಷೇರುದಾರರಿಗೆ ಕಳುಹಿಸಿದ್ದರಿಂದ ಷೇರು ಮೌಲ್ಯ ಕುಸಿದು ಈ ಸಮಸ್ಯೆ ಎದುರಾಗಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
Comments