ಆಸ್ತಿ ಕೊಳ್ಳುವವರಿಗೆ ಇಲ್ಲಿದೆ ಗುಡ್ ನ್ಯೂಸ್ : ಅಂಗೈನಲ್ಲಿರುವ ಮೊಬೈಲ್’ನಲ್ಲಿಯೇ ಸಿಗಲಿದೆ ಆಸ್ತಿ ವಿವರ

ತಂತ್ರಜ್ಞಾನವು ತುಂಬಾ ಮುಂದುವರೆದಿದೆ. ಕೈಯಲ್ಲಿ ಮೊಬೈಲ್ ಇದ್ರೆ ಸಾಕು ಎಲ್ಲವನ್ನೂ ಕೂತಲ್ಲೆ ಕಂಡು ಹಿಡಿದುಕೊಳ್ಳಬಹುದು.. ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ರಾಜ್ಯದಲ್ಲಿರುವ ಯಾವುದೇ ಆಸ್ತಿಯ ಮಾರ್ಗಸೂಚಿಯ ದರ, ಮೌಲ್ಯ ಸೇರಿದಂತೆ ಅಗತ್ಯವಾದ ಮಾಹಿತಿಗಳನ್ನು ಪಡೆಯಬಹುದಾದ ಮೊಬೈಲ್ ಆಯಪ್ ಮೌಲ್ಯ ಇದೀಗ ಸಿದ್ದವಾಗಿದೆ.
ಸಾರ್ವಜನಿಕರಿಗೆ ಸುಧಾರಿತ ಸೌಲಭ್ಯ ಕಲ್ಪಿಸಲು ಮುಂದಾಗಿರುವ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯು ಮೌಲ್ಯ ಆ್ಯಪ್ ಸಿದ್ದಪಡಿಸಿದೆ. ಜೊತೆಗೆ ಕೃಷಿಕರು ಸಾಲ ಪಡೆಯುವ ಮತ್ತು ಮರು ಪಾವತಿಸುವ ಪ್ರಕ್ರಿಯೆಯಲ್ಲಿ ಉಪನೋಂದಣಿಧಿಕಾರಿ ಕಚೇರಿಗೆ ಅಗತ್ಯವಾಗಿ ಓಡಾಡುವುದನ್ನು ತಪ್ಪಿಸಲು ಹೊಸ ವ್ಯವಸ್ಥೆಯನ್ನು ರೂಪಿಸಿದ್ದು, ಕೆಲವೇ ದಿನಗಳಲ್ಲಿ ಅನುಷ್ಠಾನವಾಗಲಿದೆ ಎಂದು ತಿಳಿಸಿದ್ದಾರೆ.
Comments