ಶೀಘ್ರದಲ್ಲಿಯೇ ವಾಟ್ಸ್‌ಆಪ್ ಬ್ಯಾನ್..!?
ಟೆಕ್ನಾಲಜಿ ಸಿಕ್ಕಾಪಟ್ಟೆ ಮುಂದುವರೆದಿದೆ. ಇತ್ತಿಚಿಗಂತೂ ಎಲ್ಲರ ಕೈಯಲ್ಲು ಕೂಡ ಆಂಡ್ರ್ಯಾಯ್ಡ್ ಪೋನ್ ಗಳಿವೆ. ವಾಟ್ಸ್‌ಆಪ್ ಎಲ್ಲರ ಮೊಬೈಲಲ್ಲೂ ಕೂಡ ಇದೆ. ಭಾರತದಲ್ಲಿ ವಾಟ್ಸ್ ಆಫ್ ಇದೀಗ ಬಹಳ ಸುದ್ದಿಯಲ್ಲಿದೆ. ಕೇಂದ್ರ ಸರ್ಕಾರ ಮತ್ತು ವಾಟ್ಸ್‌ಆಪ್ ನಡುವಿನ ಕಿತ್ತಾಟ ಎಲ್ಲರಿಗೂ ಕೂಡ ಗೊತ್ತೆ ಇದೆ.
ಇದರಿಂದ ದೇಶದಲ್ಲಿ ವಾಟ್ಸ್‌ಆಪ್ ನಿಷೇಧವಾಗುವ ಸಾಧ್ಯತೆಯು ಇದೆ. ಭಾರತದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್‌ಆಪ್‌ನ ಅಂಕಿ-ಸಂಖ್ಯೆಗಳನ್ನು ಕೇಳಿದರೆ ನಿಮಗೂ ಅಚ್ಚರಿಯಾಗಬಹುದು. ವಾಟ್ಸ್‌ಆಪ್ ಬಳಕೆದಾರರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಜಗತ್ತಿನ ಅತಿ ಜನಪ್ರಿಯ ಇನ್‌ಸ್ಟಾಂಟ್ ಮೆಸೆಂಜರ್ ಆಗಿರುವ ವಾಟ್ಸ್‌ಆಪ್ ಸದ್ಯ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಕೇವಲ ಸ್ಮಾರ್ಟ್‌ಫೋನ್ ಅಷ್ಟೇ ಅಲ್ಲದೇ, ಫೀಚರ್ ಫೋನ್‌ಗಳಲ್ಲೂ ವಾಟ್ಸ್‌ಆಪ್ ಬಂದು ಬಿಟ್ಟಿದೆ. ಸದ್ಯ ಎಷ್ಟು ಬಳಕೆದಾರರಿದ್ದಾರೆ, ದಿನಕ್ಕೆ ಎಷ್ಟು ಮೆಸೇಜ್‌ಗಳು ರವಾನೆಯಾಗುತ್ತವೆ.ಫೈಲ್‌ಗಳೆಷ್ಟು ವರ್ಗಾವಣೆಯಾಗುತ್ತವೆ ಎಂಬುದು ದೊಡ್ಡ ವಿಷಯವಾಗಿ ನಡೆಸುತ್ತಿದೆ.
Comments