ನಿಮ್ಮ ಸ್ಮಾರ್ಟ್ ಫೋನ್ ನಿಂದ ಸೊಳ್ಳೆ ಹೋಡಿಸಬಹುದು..! ಹೇಗೆ ಅಂತ ಯೋಚನೆ ಮಾಡುತ್ತಿದ್ದೀರಾ..? ಹಾಗಾದ್ರೆ ಇದನ್ನೊಮ್ಮೆ ಓದಿ

ಸೊಳ್ಳೆಗಳು ಎಂದಾಕ್ಷಣ ಎಲ್ಲರೂ ಹೆದರುತ್ತಾರೆ. ಯಾಕೆಂದ್ರೆ ನಿದ್ರೆ ಮಾಡೋಕೆ ಬಿಡದ ಏಕಾಗ್ರತೆಯನ್ನ ಹಾಳು ಮಾಡುವಂತಹಾ ವಿಚಿತ್ರ ಜೀವಿಯಿದು. ಹೌದು, ಎಲ್ಲರಿಗೂ ದೊಡ್ಡ ದುಷ್ಮನ್ ಅಂದ್ರೆ ಈ ಸೊಳ್ಳೆ. ಸೊಳ್ಳೆಗಳಿಂದ ನಿಮ್ಮ ನಿದ್ರೆ ಹಾಳಾಗೋದು ಖಂಡಿತಾ..
ಅಂದಹಾಗೆ, ಟೆಕ್ನಾಲಜಿಯಿಂದಲೇ ಇಂದಿನ ಪ್ರಪಂಚ ನಡೆಯುತ್ತಿದೆ ಎಂಬುದು ಸತ್ಯವಾದ ಮಾತು. ಅದೇ ತಾಂತ್ರಿಕತೆ ಈಗ ಹೊಸ ರೂಪಪಡೆದುಕೊಳ್ಳುತ್ತಿದೆ. ಸೊಳ್ಳೆಗಳು ಸುಮಾರು 60 ರೀತಿಯ ಖಾಯಿಲೆಗಳನ್ನು ಹರಡುತ್ತವೆ. ಒಂದು ಮಿ.ಮೀ. ಗಿಂತಲೂ ಚಿಕ್ಕದಾಗಿರುವ ಇವು ಪ್ರಪಂಚವನ್ನೇ ನಡುಗಿಸುತ್ತವೆ . ಇವುಗಳನ್ನು ಸಾಯಿಸಲು ಮಸ್ಕಿಟೋ ಕಾಯಿಲ್ಸ್, ಕ್ರೀಂಗಳನ್ನು ಎಷ್ಟೇ ಬಳಸುತ್ತಿದ್ದರೂ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆಯೇ ಹೊರತು ಯಾವುದೇ ಪ್ರಯೋಜನವಾಗುವುದಿಲ್ಲ.ಅದಕ್ಕೆ ಈಗ ಒಂದು ಸುಲಭ ಪರಿಹಾರವಿದೆ. ಇದಕ್ಕೆ ಬೇಕಾಗಿರುವುದು ಒಂದು ಸ್ಮಾರ್ಟ್ ಫೋನ್. ಫೋನಿನಿಂದಲೇ ಸೊಳ್ಳೆಗಳನ್ನು ಓಡಿಸಬಹುದು. ಅಚ್ಚರಿಯಾಗುತ್ತಿದೆಯಲ್ಲವೇ? ಹಾಗಾದ್ರೆ ಸ್ಮಾರ್ಟ್ ಫೋನ್ ಇಂದ ಸೊಳ್ಳೆಗಳನ್ನ ನಿಜವಾಗ್ಲು ಸಾಯಿಸಬಹುದಾ..? ಅಂತೆಲ್ಲಾ ಯೋಚಿಸ್ತಾ ಇದ್ದೀರಾ..? ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಆ್ಯಪ್ ಅಳವಡಿಸಿಕೊಂಡು ಅದನ್ನು ಆನ್ ಮಾಡಿಕೊಂಡು ‘ಮಸ್ಕಿಟೋ ರಿಪೆಲ್ಲೆಂಟ್’ ಎಂಬ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಂಡು ಇನ್ ಸ್ಟಾಲ್ ಮಾಡಿಕೊಂಡ ನಂತರ ಅದನ್ನು ಆನ್ ಮಾಡಿದರೆ ಒಂದು ವಿಧವಾದ ಫ್ರೀಕ್ವೆನ್ಸಿ (ತರಂಗಗಳು)ಶಬ್ಧವನ್ನು ಬಿಡುಗಡೆ ಮಾಡುತ್ತದೆ. ಆ ಶಬ್ಧವನ್ನು ಭರಿಸಲಾರದೆ ಸೊಳ್ಳೆಗಳು ಓಡಿಹೋಗುತ್ತವೆ. ಈ ಆ್ಯಪ್ ಮೂಲಕ ಕೇವಲ ಸೊಳ್ಳೆಗಳನ್ನೇ ಅಲ್ಲದೆ. ಅದರಲ್ಲಿರುವ ‘ಎಂ ಟ್ರಾಕ್ಟರ್’ ಎಂಬ ಫೀಚರ್ ನಿಂದ ಮನೆಯಲ್ಲಿ ಎಷ್ಟು ಸೊಳ್ಳೆಗಳಿವೆ, ಅವು ಎಲ್ಲೆಲ್ಲಿ ಹೆಚ್ಚಾಗಿ ಇರುತ್ತವೆ ಎಂಬ ವಿಷಯವನ್ನೂ ತಿಳಿಸುತ್ತದೆ.
Comments