ನಿಮ್ಮ ವಾಟ್ಸಾಪ್ ಡೇಟಾ ಬ್ಯಾಕ್’ಅಪ್ ತಗೊಂಡಿಲ್ಲ ಅಂದ್ರೆ ಈಗಲೇ ತಗೋಬಿಡಿ…!? ಇಲ್ಲ ಅಂದ್ರೆ ಬ್ಯಾಕ್’ಅಫ್ ಸಿಗಲ್ಲ ಅಷ್ಟೆ..!

ವಾಟ್ಸಾಪ್ ತನ್ನ ಬಳಕೆದಾರರಿಗೆ ಮತ್ತೊಂದು ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಇನ್ನು ಸ್ವಲ್ಪ ದಿನಗಳಲ್ಲಿ , ಆಡಿಯೋ ವಿಡಿಯೊ ಮೆಸೇಜ್’ಗಳು, ಪಿಕ್ಚರ್ ಸಂದೇಶಗಳು, ಟೆಕ್ಸ್ಟ್ ಗಳು ಸೇರಿದಂತೆಯೇ ವಾಟ್ಸಾಪ್ ನ ಎಲ್ಲಾ ರೀತಿಯ ಸಂದೇಶಗಳನ್ನೂ ಕೂಡ ಡಿಲೀಟ್ ಮಾಡುತ್ತಿದೆ. ಈಗಾಗಲೇ ಬಳಕೆದಾರರ ಎಲ್ಲಾ ಬಗೆಯ ದತ್ತಾಂಶಗಳನ್ನು ಅಳಿಸಿಹಾಕೋದಕ್ಕೆ ವಾಟ್ಸಾಪ್ ನಿರ್ಧಾರ ಮಾಡಿಕೊಂಡಿದೆ.
ವರ್ಷದ ಒಳಗೆ ತನ್ನ ಸೇವೆಗೆ ಹೊಸ ರೂಪ ನೀಡುವ ಉದ್ದೇಶದಿಂದ ವಾಟ್ಸಾಪ್ ಹೀಗೊಂದು ಕಾರ್ಯವನ್ನು ಜಾರಿಗೆ ತರಲು ನಿರ್ಧಾರ ಮಾಡಿದೆ. ಹಾಗಾಗಿ ವಾಟ್ಸಾಪ್ ಬಳಕೆದಾರರು ತಮ್ಮ ಹಳೆಯ ವಾಟ್ಸಾಪ್ ಡೇಟಾವನ್ನ ಸಂಗ್ರಹಿಸಿಕೊಳ್ಳುವುದಕ್ಕೆ ಗೂಗಲ್ ಡ್ರೈವ್ ಸಹಾಯಕ್ಕೆ ಬರಲಿದೆ. ಅದಕ್ಕಾಗಿ ಗೂಗಲ್ ತನ್ನ ಬಳಕೆದಾರರಿಗೆ 15 ಜಿಬಿ ಉಚಿತ ಡೇಟಾ ಸ್ಪೇಸ್ ಅನ್ನು ನೀಡುತ್ತಿದೆ. ತಮ್ಮ ಡೇಟಾವನ್ನ ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳೋದಕ್ಕೆ ವಾಟ್ಸಾಪ್ ತನ್ನ ಗ್ರಾಹಕರಿಗೆ ನವೆಂಬರ್ 12 ರ ವರೆಗೆ ಕಾಲಾವಕಾಶ ನೀಡಿದೆ. ಆನಂತರದಲ್ಲಿ ಡೇಟಾ ಡಿಲೀಟ್ ಆದ್ರೆ ಅದಕ್ಕೆ ನಾವು ಹೊಣೆಯಲ್ಲ ಅಂತ ವಾಟ್ಸಾಪ್ ಸಂಸ್ಥೆಯು ತಿಳಿಸಿದೆ.
Comments