ಕೆಲವೊಂದು ಬಾರಿ ವೆಬ್ ಸೈಟ್ ಓಪನ್ ಮಾಡುವಾಗ 401, 403, 404 ಅಂತಾ ಬರುತ್ತೆ..! ಯಾಕೆ ಗೊತ್ತಾ..?

ಒಂದು ಕಾಲದಲ್ಲಿ ಬಹಳಷ್ಟು ಮಂದಿ ಇಂಟರ್‌ನೆಟನ್ನು ಕೇವಲ ಕಂಪ್ಯೂಟರ್‌ಗಳಿಗೆ ಮಾತ್ರ ಬಳಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಜನ 4ಜಿ ಮಾಯೆಯಲ್ಲಿ ತೇಲಾಡುತ್ತಿದ್ದಾರೆ. ಪ್ರತಿ ಫೋನಲ್ಲೂ ಇಂಟರ್‌ನೆಟ್ ಲಭ್ಯ. ಈ ಕ್ರಮದಲ್ಲಿ ಆ ಇಂಟರ್‌ನೆಟ್ ಮೂಲಕ ಅವರು ಅಗತ್ಯವಾದ ಅದೆಷ್ಟೋ ವೆಬ್‌ಸೈಟ್‌ಗಳನ್ನು ಓಪನ್ ಮಾಡುತ್ತಿರುತ್ತಾರೆ. ಆದರೆ ಒಮ್ಮೊಮ್ಮೆ ವೆಬ್‍ಸೈಟ್ ಓಪನ್ ಮಾಡುವಾಗ 401, 403, 404, 500 ಎಂಬ ಸಂಖ್ಯೆಗಳ ಹೆಸರಿನ ಎರರ್ ಮೆಸೇಜ್ ಬರುತ್ತಿರುತ್ತದೆ. ಈ ಕ್ರಮದಲ್ಲಿ ಈ ನಂಬರ್‌ಗಳು ಯಾಕೆ ಬರುತ್ತವೆ..? ಇಂದಿನ ಯುಗ ಮಾಯಾ ಯುಗವಾಗಿ ಮಾರ್ಪಟ್ಟಿದೆ. ಇಂಟರ್‌ನೆಟ್ ಎಂಬ ಟೆಕ್ನಾಲಜಿ ಜಗತ್ತನ್ನೇ ಒಂದು ಪುಟ್ಟ ಗ್ರಾಮವನ್ನಾಗಿಸಿದೆ. ಅಂಗೈಯಲ್ಲೇ ಇಡೀ ಪ್ರಪಂಚವನ್ನೇ ಒಂದು ಸುತ್ತು ಹಾಕಿ ಬರಬಹುದಾಗಿದೆ.
ಒಂದು ವೇಳೆ ಇಂತಹ ಎರರ್ ಮೆಸೇಜ್ ಏನಾದರೂ ಕಾಣಿಸಿದ್ದೇ ಆದಲ್ಲಿ ಆ ಸೈಟಿಗೆ ಯೂಸರ್ ನೇಮ್, ಪಾಸ್ ವರ್ಡ್ ಇದೆ ಎಂದರ್ಥ. ಅವುಗಳನ್ನ ಸರಿಯಾಗಿ ಎಂಟರ್ ಮಾಡಿದ್ದಲ್ಲಿ ಈ ಎರರ್ ಬರಲ್ಲ. ಇಲ್ಲದಿದ್ದರೆ ಮಾತ್ರ ಈ ರೀತಿಯ ಎರರ್ ಮೇಸೇಜ್‌ಗಳು ಬರುತ್ತಿರುತ್ತವೆ. ಈ ರೀತಿಯ ಮೆಸೇಜ್ ಏನಾದ್ರು ಬಂತು ಎಂದರೇ ಅದರ ಅರ್ಥ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ಯೂಸರ್ ಪರ್ಮಿಷನ್ ಇಲ್ಲ ಎಂದು. ಸರ್ವರ್‌ನಲ್ಲಿರುವ ಸೆಕ್ಯೂರ್ಡ್ ಫೋಲ್ಡರನ್ನು ಯಾರಾದರು ಓಪನ್ ಮಾಡಬೇಕೆಂದುಕೊಂಡರೇ ಈ ರೀತಿಯ ಎರರ್ ಮೆಸೇಜ್ ಕಾಣಿಸುತ್ತದೆ. ಸದರಿ ಪೋಲ್ಡರ್ ರಕ್ಷಣೆಗಾಗಿ ಈ ರೀತಿಯ ಮೆಸೇಜ್ ಬರುತ್ತದೆ. ಈ ಎರರ್ ಮೆಸೇಜ್‌ನಿಂದ ನಮಗೆ ಏನು ಗೊತ್ತಾಗುತ್ತದೆಂದರೆ….ಯೂಸರ್ ಹುಡುಕುತ್ತಿರುವ ಆ ಸೈಟ್ ಸರ್ವರ್‌ನಲ್ಲಿ ಇಲ್ಲ ಎಂದರ್ಥ. ಆ ಸೈಟ್‌ನ ಪೋಲ್ಡರ್‌ಗಳು, ಫೈಲ್ಸ್ ಏನೂ ಸರ್ವರ್‌ನಲ್ಲಿ ಇಲ್ಲದಿದ್ದರೆ ಆಗ ಆ ಸೈಟನ್ನು ಯಾರಾದರು ಓಪನ್ ಮಾಡಲು ಪ್ರಯತ್ನಿಸಿದರೇ ಈ ರೀತಿಯ ಮೆಸೇಜ್ ಬರುತ್ತದೆ. ಇದು ಸರ್ವರ್ ಸೈಡ್ ಎರರ್ ಮೆಸೇಜ್. ಸರ್ವರ್‍ನಲ್ಲಿರುವ PHP ಫೈಲ್ಸ್, ಡಾಟಾಬೇಸ್, ಪೋಲ್ಡರ್‌ಗಳು ತಪ್ಪಾಗಿ ಸೇವ್ ಆದರೆ ಈ ಮೆಸೇಜ್ ಬರುತ್ತದೆ.
Comments