ವಾಟ್ಸಾಪ್ ಯೂಸ್ ಮಾಡ್ತಿದ್ದೀರಾ..?ಹಾಗಾದ್ರೆ ಇದನ್ನೊಮ್ಮೆ ಓದಿ

11 Aug 2018 2:15 PM | Technology
485 Report

ಟೆಕ್ನಾಲಜಿ  ಮುಂದುವರೆದಂತೆ ಸಾಮಾಜಿಕ ಜಾಲತಾಣಗಳು ಅಪ್ಡೇಟ್ ಆಗುತ್ತಿವೆ. ಆದರೆ ಇನ್ಮುಂದೆ ವಾಟ್ಸಾಪ್ ಬಳಕೆದಾರರು ಒಂದೇ ಸಂದೇಶವನ್ನು ಐದಕ್ಕಿಂತ ಜಾಸ್ತಿ ಜನರಿಗೆ ಒಂದೇ ಬಾರಿ ಫಾರ್ವರ್ಡ್ ಮಾಡಲು ಸಾಧ್ಯವಿರುವುದಿಲ್ಲ..

ವಾಟ್ಸಾಪ್ ಈ ಬಗ್ಗೆ ಬುಧವಾರ ಅಧಿಕೃತವಾದ ಮಾಹಿತಿಯನ್ನು ನೀಡಿದೆ. ಭಾರತದಲ್ಲಿ 20 ದಶಲಕ್ಷಕ್ಕಿಂತ ಹೆಚ್ಚು ವಾಟ್ಸಾಪ್ ಬಳಕೆದಾರರಿದ್ದು, ಸಂದೇಶ ಫಾರ್ವರ್ಡ್ ಮಾಡುವ ಮಿತಿಯನ್ನು ಐದಕ್ಕಿಳಿಸುವುದಾಗಿ ವಾಟ್ಸಾಪ್ ತಿಳಿಸಿದೆ. ನಕಲಿ ಮತ್ತು ಪ್ರಚೋದನಕಾರಿ ವಿಷಯಗಳ ಹರಡುವಿಕೆ ಮೇಲೆ ನಿಷೇಧವನ್ನು ಹೇರಲು ವಾಟ್ಸಾಪ್ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ತಿಳಿಸಲಾಗಿದೆ. ಒಂದು ತಿಂಗಳ ಹಿಂದೆಯೇ ಪ್ರಯೋಗ ಶುರು ಮಾಡಿರುವುದಾಗಿ ವಾಟ್ಸಾಪ್ ಹೇಳಿದ್ದು ಅಧಿಕೃತವಾಗಿ ಬುಧವಾರದಿಂದ ಜಾರಿಗೆ ಬಂದಿದೆ ಎಂದು ತಿಳಿಸಲಾಗಿದೆ.

Edited By

Manjula M

Reported By

Manjula M

Comments