ಭಾರತದಲ್ಲಿ ಇನ್ಸ್ಟಾಗ್ರಾಂ, ಫೇಸ್ಬುಕ್, ವಾಟ್ಸಾಪ್ ಬ್ಲಾಕ್ ಆಗುತ್ತಾ..!
ಇತ್ತಿಚಿಗೆ ಸಾಮಾಜಿಕ ಜಾಲತಾಣಗಳು ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೆಟ್ ಮಾಡಿದೆ. ನಮ್ಮ ರಾಷ್ಟ್ರೀಯ ಭದ್ರತೆಗೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಯಾವುದೇ ಸಮಸ್ಯೆಗಳು ಎದುರಾಗುವಂತಹ ಸನ್ನಿವೇಶಗಳು ಉಂಟಾದಾಗ ಸಾಮಾಜಿಕ ಜಾಲತಾಣಗಳಾದ ವಾಟ್ಸ್ಯಾಪ್, ಇನ್ಸ್ಟಾಗ್ರಾಂ, ಫೇಸ್ ಬುಕ್, ಟೆಲಿಗ್ರಾಂ ಮುಂತಾದವುಗಳನ್ನು ಬ್ಲಾಕ್ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ತಾಂತ್ರಿಕ ಕ್ರಮಗಳ ಬಗ್ಗೆ ಟೆಲಿಕಾಂ ಇಲಾಖೆ ಸಂಬಂಧಿತರಿಂದ ಅಭಿಪ್ರಾಯವನ್ನು ತಿಳಿಸಿದೆ.
ಜುಲೈ 18ರಂದು ಈ ಬಗ್ಗೆ ಎಲ್ಲಾ ಟೆಲಿಕಾಂ ಆಪರೇಟರುಗಳು, ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ, ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಮುಂತಾದ ಸಂಘಟನೆಗಳಿಗೆ ಟೆಲಿಕಾಂ ಇಲಾಖೆ ಪತ್ರ ಬರೆದು ಈ ಮೊಬೈಲ್ ಅಪ್ಲಿಕೇಶನ್ಗನಳನ್ನು ಐಟಿ ಕಾಯಿದೆಯ ಸೆಕ್ಷನ್ 69ಎ ಅನ್ವಯ ನಿರ್ಬಂಧಿಸುವ ಕುರಿತಂತೆ ಅವುಗಳ ಅಭಿಪ್ರಾಯವನ್ನು ತಿಳಿಸಿದೆ. ಐಟಿ ಕಾಯಿದೆಯ ಸೆಕ್ಷನ್ 66ಎ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನಿರ್ಬಂಧಿಸುವ ಅಧಿಕಾರವನ್ನು ಸರ್ಕಾರಕ್ಕೆ ನೀಡುತ್ತದೆ. ಇತ್ತೀಚೆಗೆ ದೇಶದಲ್ಲಿ ಸಂಭವಿಸಿರುವ ಹಲವಾರು ಗುಂಪು ಥಳಿತ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಗುಂಪು ಥಳಿತ ಘಟನೆಗಳಿಗೆ ವಾಟ್ಸ್ಯಾಪ್ ನಕಲಿ ಸಂದೇಶಗಳು ಹಾಗೂ ವದಂತಿಗಳೇ ಕಾರಣವೆಂದ ತಿಳಿದು ಬಂದಿರುವುದು ವಿಪರ್ಯಾಸ.
Comments