ಇನ್ಮುಂದೆ ಅನಗತ್ಯ ಕಾಲ್ ಗಳ ಕಿರಿಕಿರಿ ತಪ್ಪಲಿದೆ..!

27 Jul 2018 5:13 PM | Technology
547 Report

ಮೊಬೈಲ್‌ ಗಳಿಗೆ ಬರುವಂತಹ ಟೆಲಿ ಮಾರ್ಕೆಟಿಂಗ್‌ ಕರೆಗಳನ್ನು ತಡೆಯಬೇಕು ಎಂದು ದೂರ ಸಂಪರ್ಕ ನಿಯಂತ್ರಕ ಟ್ರಾಯ್‌ ತಿಳಿಸಿದೆ.

ಕರೆ ಅಥವಾ ಮೆಸೇಜ್‌ ಕಳುಹಿಸುವ ಸಂಸ್ಥೆ, ಆಪರೇಟರ್‌ ಗಳ ಜೊತೆ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ನೋಂದಣಿ ಮಾಡಿದವರು ಮಾತ್ರ ಮಾರ್ಕೆಂಟಿಂಗ್ ವಿಭಾಗದಲ್ಲಿನ ಕರೆ ಅಥವಾ ಸಂದೇಶಗಳನ್ನು ಕಳುಹಿಸುವಂತೆ ಆಗಬೇಕು ಎಂದು ಎಲ್ಲ ಸಂಸ್ಥೆಗಳಿಗೆ ತಿಳಿಸಿದೆ. ಅಷ್ಟು ಮಾತ್ರವಲ್ಲ, ಗ್ರಾಹಕರಲ್ಲಿಯೂ ಯಾರೆಲ್ಲ ಈ ಸಂದೇಶ ಅಥವಾ ಕರೆಗಳಿಗೆ ಸಬ್‌ಸ್ಕ್ರೈಬ್‌ ಆಗಿದ್ದಾರೋ ಅಂತವರಿಗೆ ಮಾತ್ರ ಇದರ ಉಪಯೋಗ ಪಡೆಯಬೇಕು ಎಂದು ಟ್ರಾಯ್‌ ಸಂಸ್ಥೆ ತಿಳಿಸಿದೆ.

Edited By

Manjula M

Reported By

Manjula M

Comments