ಎಚ್ಚರ..! ನಿಮ್ಮ ಬ್ಯಾಂಕ್ ಮಾಹಿತಿಗಳನ್ನು ಯಾರಿಗೂ ನೀಡಬೇಡಿ..?!
ತಂತ್ರಜ್ಞಾನ ಬದಲಾದಂತೆ ನಮ್ಮ ಜೀವನ ಶೈಲಿಯೂ ಬದಲಾಗುತ್ತಿದೆ, ಇನ್ನು ತಂತ್ರಜ್ಞಾನದಿಂದಾಗಿ ನಮ್ಮ ಎಲ್ಲಾ ವಹಿವಾಟುಗಳು ಈಗ ಕ್ಯಾಶ್ ಲೆಸ್ ಆಗಿದ್ದು ಹೆಚ್ಚುಕಮ್ಮಿ ಆರ್ಥಿಕ ವ್ಯವಹಾರ ಆನ್ ಲೈನ್ ಮೂಲಕ ಮಾಡಲು ಇಚ್ಚಿಸುತ್ತಾರೆ ಮತ್ತು ಮೋದಿಯವರು ಡಿಜಿಟಲ್ ಇಂಡಿಯಾ ಘೋಷಣೆಯಾದ ಮೇಲಂತೂ ಇದರ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ.
ತಂತ್ರಜ್ಞಾನನದಿಂದ ನಮಗೆ ಎಷ್ಟು ಒಳಿತಿದೆಯೋ ಅಷ್ಟೇ ಕೆಡುಕುಗಳು ಕೂಡ ಇವೆ. ದಿನ ಬೆಳಗಾದರೆ ಆನ್ ಲೈನ್ ಮೂಲಕ ವಂಚನೆಗೊಳಗಾದ ಅನೇಕ ಪ್ರಕರಣಗಳನ್ನು ನಾವು ಕಾಣುತ್ತೇವೆ ಅದಕ್ಕೆ ಕಾರಣ ಈ ನಮ್ಮ ತಂತ್ರಜ್ಞಾನವೇ ಆಗಿದೆ.ಕಾಣದ ಊರಿನಲ್ಲಿ ಕುಳಿತ ಕೆಲವು ಹ್ಯಾಕರ್ಗಳು ತಮ್ಮ ಬೆರಳ ತುದಿಯಲ್ಲಿಯೇ ನಮ್ಮ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿ ನಮಗೆ ಗೊತ್ತಿಲ್ಲದಂತೆ ನಮ್ಮ ಖಾತೆಯಲ್ಲಿರುವ ಹಣವನ್ನು ದೋಚಿರುತ್ತಾರೆ ಹಾಗಾಗಿ ಇಂದು ಪ್ರತಿಯೊಬ್ಬ ನಾಗರೀಕನು ಎಚ್ಚರಿಕೆಯಿಂದಿದ್ದರೆ ಈ ರೀತಿಯ ಹ್ಯಾಕರ್ಗಳಿಂದ ತಪ್ಪಿಸಿಕೊಳ್ಳಬಹುದು.ಈಗಾಗಲೇ ಈ ಬಗ್ಗೆ ಎಲ್ಲ ಬ್ಯಾಂಕ್ಗಳು ತಮ್ಮ ಸಿಬ್ಬಂದಿಗಳೆಂದಾಗಲಿ ಅಥವಾ ಬೇರೇ ಯಾರೇ ಕರೆ ಮಾಡಿ ನಿಮ್ಮಇಗ ಅಕೌಂಟ್ ಮಾಹಿತಿ, ರಿಜಿಸ್ಟರ್ಡ್ ಮೊಬೈಲ್ ನಂಬರ್, ನೀವು ವ್ಯವಹರಿಸಲು ಬಳಸುವಂತಹ ಪಿನ್ ಅನ್ನು ಯಾರಿಗೂ ನೀಡಬಾರದು ಎಂದು ಹೇಳಿರುತ್ತಾರೆ. ಆದರೆ ಕೆಲವು ಚಾಲಕಿಗಳು ಯಾಮಾರಿಸಿ ಈ ಮಾಹಿತಿಗಳನ್ನು ಪಡೆದು ಲಕ್ಷ ಲಕ್ಷ ಯಾಮಾರಿಸಿರುವ ಪ್ರಕರಣಗಳು ಇಂದು ನಮ್ಮ ಕಣ್ಣ ಮುಂದಿವೆ.ದೂರದ ಬೇರೆ ಬೇರೆ ದೇಶಗಳಿಂದ ಹ್ಯಾಕ್ ಮಾಡುವ ಹ್ಯಾಕ್ ಪ್ರವೀಣರು ನಮ್ಮ ಮಾಹಿತಿಯನ್ನು ಕಲೆ ಹಾಕಿ ನೀವು ನಂಬುವಂತೆ ನಿಮಗೆ ಕರೆ ಮಾಡುತ್ತಾರೆ, ಉದಾಹರಣೆಗೆ ನಿಮಗೆ ಲಂಡನ್ ನಲ್ಲಿ ಒಂದು ಬಂಪರ್ ಲಾಟರಿ ಬಂದಿದ್ದು ಅದಕ್ಕೆ ನೀವು ಆಯ್ಕೆಯಾಗಿದ್ದೀರಿ, ನಿಮಗೆ ಆ ಹಣ ವರ್ಗಾಹಿಸಲು ನಿಮ್ಮ ಖಾತೆಯ ವಿವಿರ ಮತ್ತು ಪಿನ್ ಅವಶ್ಯಕವಿದೆ ಎಂದು ನಂಬಿಸಿ ಕೊನೆಗೆ ನಿಮ್ಮ ಮಾಹಿತಿಯನ್ನ ಪಡೆದು ಹಣ ದೋಚುತ್ತಾರೆ.ಹಾಗೆಯೇ ನಿಮ್ಮ ಮಾಹಿತಿಗಳನ್ನು ಕಲೆಹಾಕಿ ಹೈ ಬ್ರಿಡ್ ಡೇಟಾ ಕಲೆಕ್ಟರ್ ಮೂಲಕ ನೀವು ಮಾಡುವ ಎಲ್ಲಾ ವ್ಯವಹಾರಗಳ ಮೇಲೆ ಕಣ್ಣಿಟ್ಟು ಅದರ ತದ್ರೂಪಿಯನ್ನು ತಯಾರು ಮಾಡಿ (ಡ್ಯೂಪ್ಲಿಕೇಟ್ ಸಿಮ್, ಎಟಿಎಂ, ಕ್ರೆಡಿಟ್ ಕಾರ್ಡ್) ನಿಮ್ಮ ಹೆಸರಿನಲ್ಲಿ ಅವರು ವ್ಯವಹರಿಸುತ್ತಾರೆ.ಆದರೆ ದೂರದ ಊರಿನಲ್ಲಿ ಅವರು ಮಾಡುವ ಈ ಕೃತ್ಯವನ್ನು ತಡೆಯಲು ಅನೇಕ ಕಾನೂನು ತೊಡಕುಗಳಿರುವ ಕಾರಣದಿಂದಾಗಿ ಅಂತವರಿಗೆ ಶಿಕ್ಷಿಸುವುದೂ ಕಷ್ಠವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ತಮಗೆ ಯಾವುದೇ ಕರೆ ಬಂದಾಗಲೂ ಕೂಡ ಜಾಗರೂಕವಾಗಿ ಅವರೊಂದಿಗೆ ಮಾತನಾಡಬೇಕು ಯಾವುದೇ ಕಾರಣಕ್ಕೂ ತಾವು ವ್ಯವಹಾರಕ್ಕಾಗಿ ಬಳಸುವ ಪಿನ್ ಅಥವಾ ಪಾಸ್ ವರ್ಡ್ಗಳನ್ನು ಹಂಚಿಕೊಳ್ಳಬಾರದು…..!
Comments