ATM ನಲ್ಲಿ ಹಣ ಡ್ರಾ ಮಾಡಿದ ಮೇಲೆ ಎಚ್ಚರ..! ಇಲ್ಲವಾದರೆ ಖಾತೆಯ ಗುಟ್ಟು ರಟ್ಟಾಗೋದು ಗ್ಯಾರೆಂಟಿ..!!

ನಾವು ಎಟಿಎಂ ಗಳಲ್ಲಿ ಎಲ್ಲಿ, ಯಾವಾಗ ಬೇಕಾದರೂ ಕನಿಷ್ಠ ಮೊತ್ತವಾದ 100 ರೂ ಯಿಂದ ಹಿಡಿದು 50 ಸಾವಿರಗಳ ವರೆಗೆ ಡ್ರಾ ಮಾಡಿಕೊಳ್ಳುವ ವ್ಯವಸ್ಥೆಯಿದೆ. ಇಂತಹ ಅನುಕೂಲವುಳ್ಳ ATM ಅನ್ನು ಹೆಚ್ಚಿನ ಜನರು ಈಗಲೂ ಕೂಡ ಬಳಸುತ್ತಿದ್ದಾರೆ.
ಸದ್ಯ ನಾವು ಇಲ್ಲಿ ಗಮನಿಸ ಬೇಕಾದಂತಹ ವಿಷಯ ATM ಗಳ ಬಗ್ಗೆ ಅಲ್ಲ, ಅದರ ಬದಲಾಗಿ ನಾವು ATM ನಿಂದ ಹಣ ಡ್ರಾ ಮಾಡಿದಾಗ ಬರುವಂತಹ ರಶೀದಿಯನ್ನ. ಕೆಲವರು ಆ ರಶೀದಿಯನ್ನು ATM ನಲ್ಲಿರುವ ಕಸದ ಬುಟ್ಟಿಗೋ ಅಥವಾ ಸಿಕ್ಕ ಸಿಕ್ಕ ಜಾಗದಲೋ ಬಿಸಾಕಿ ಹೋರಟು ಬಿಡುತ್ತಾರೆ. ಆದರೆ ಇದರಿಂದ ಆಗುವ ತೊಂದರೆ ಬಗ್ಗೆ ಯಾರು ಯೋಚಿಸುವುದಿಲ್ಲ. ಆದರೆ ಇದರಿಂದ ಖಂಡಿತವಾಗಿಯೂ ತೊಂದರೆಯಾಗುತ್ತದೆ. ಈ ರೀತಿ ಹಣ ಡ್ರಾ ಮಾಡಿದ ರಶೀದಿಯನ್ನ ಅಲ್ಲಲ್ಲಿ ಬೀಸಾಕುವುದರಿಂದ ನಮ್ಮ ಖಾತೆಯ ಗುಟ್ಟನ್ನ ಹ್ಯಾಕರ್ ಗಳಿಗೆ ಬಿಟ್ಟುಕೊಟ್ಟಂತಾಗುತ್ತದೆ. ನಾವು ATM ಕಾರ್ಡ್ ನ ಬಳಸಿ ಹಣ ಡ್ರಾ ಮಾಡುವಾಗ ಅದರ ಹಿಂದೆ ಒಂದು ದೊಡ್ಡ ಪ್ರೋಸೆಸ್ ನಡೆಯುತ್ತದೆ.
ಹಂತ ಹಂತವಾಗಿ ನಾವು ನೀಡುವ ಮಾಹಿತಿಯನ್ನ ಅವಲಂಬಿಸಿ ನಮಗೆ ಬೇಕಾದಷ್ಟು ಹಣ ಮಾತ್ರ ನಮ್ಮ ಕೈ ಸೇರುತ್ತದೆ. ಒಮ್ಮೊಮ್ಮೆ ತಾಂತ್ರಿಕ ದೋಷಗಳಿಂದಾಗಿಯೂ ಕೂಡ ನಾವು ಪಡೆಯ ಬೇಕಾದ ಹಣ ನಮ್ಮ ಕೈ ಸೇರದೆಯೇ ಕೆಲವೊಮ್ಮೆ ನಮ್ಮ ಖಾತೆಯಿಂದ ಹಣ ಕಡಿತಗೊಂಡಿರುತ್ತದೆ. ಈ ATM ರಸೀದಿಯಿಂದ ನಮ್ಮ ಖಾತೆಯಲ್ಲಿ ಉಳಿದಿರುವ ಹಣ ಎಷ್ಟು, ನಾವು ಡ್ರಾ ಮಾಡಿದ ಹಣ ಎಷ್ಟು ಎಂಬ ಮಾಹಿತಿ ಇರುತ್ತದೆ. ಕೆಲವೊಮ್ಮೆ ನಮ್ಮನ್ನ ಹಲವಾರು ಜನ ಗಮನಿಸುತ್ತಿರುತ್ತಾರೆ, ಅಂತವರಿಗೆ ನಾವು ಹೆಚ್ಚಿನ ಮೊತ್ತದ ಹಣವನ್ನ ಡ್ರಾಮಾಡಿದ ವಿಷಯ ತಿಳಿದು ನಮ್ಮನ್ನ ಹಿಂಬಾಲಿಸಿ ನಮ್ಮ ಹಣ ವನ್ನು ಕಿತ್ತುಕೊಳ್ಳುವ ಪ್ರಸಂಗಗಳು ಕೂಡ ಕಣ್ಣ ಮುಂದೆಯೇ ನಡೆದಿವೆ. ನಮ್ಮ ಈ ರಸೀದಿಯಿಂದ ನಮ್ಮ ಖಾತೆಯ ವಿವರವನ್ನ ಡಿಕೋಡ್ ಮಾಡಿ ಖಾತೆಯಲ್ಲಿನ ಹಣವನ್ನ ದೋಚುವ ಖತರ್ನಾಕ್ ಕಳ್ಳರು ಕೂಡ ಇದ್ದಾರೆ. ಆದ್ದರಿಂದ ಎಟಿಎಂ ಬಳಿ ಹೋಗುವಾಗ ಜೋಪಾನವಾಗಿ ಹೋಗಬೇಕು. ಹಾಗೂ ಎಲ್ಲವನ್ನು ಗಮನದಲ್ಲಿಟ್ಟುಕೊಳ್ಳಬೇಕು.
Comments