2020ರ ಹೊತ್ತಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಡ್ರೋಣ್ ಮಾದರಿಯ ಹಾರುವ ಕೊಡೆ..!
ಇತ್ತಿಚಿಗೆ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಮನುಷ್ಯ ಮಾಡುವ ಕೆಲಸವನ್ನೆಲ್ಲಾ ತಂತ್ರಜ್ಞಾನವನ್ನ ಬಳಸಿಕೊಂಡು ಮಾಡಬಹುದು. 2020ರ ಹೊತ್ತಿಗೆ ಮಾರುಕಟ್ಟೆಗೆ ಡ್ರೋಣ್ ಮಾದರಿಯ ಹಾರುವ ಕೊಡೆ ಲಗ್ಗೆ ಇಡುತ್ತಿದೆ.
ಮಾನವನಿಗೆ ಬೇಕಾದ ರೀತಿಯಲ್ಲಿ ತಕ್ಕಂತೆ ತಂತ್ರಜ್ಞಾನದ ಅಭಿವೃದ್ಧಿ ಪಡಿಸುವುದು ಜಪಾನಿಗರ ವೈಶಿಷ್ಟ್ಯವಾಗಿದೆ. ಇದೇ ಕಾರಣಕ್ಕೆ ಆಟೋಮೊಬೈಲ್ ಕ್ಷೇತ್ರ, ಎಲೆಕ್ಟ್ರಾನಿಕ ಉಪಕರಣಗಳು, ಗೃಹಬಳಕೆ ವಸ್ತುಗಳು, ಮೊಬೈಲ್ ಹೀಗೆ ಎಲ್ಲ ತಂತ್ರಜ್ಞಾನದಲ್ಲೂ ಜಪಾನ್ ಟೆಕ್ನಾಲಜಿ ಅಂದ್ರೆ ಜನ ಕಣ್ಣು ಬಾಯಿ ಬಿಡ್ತಾರೆ. ಜಪಾನ್‌ನ ಕಂಪನಿಯೊಂದು ಡ್ರೋಣ್ ಮಾದರಿಯ ಛತ್ರಿಯೊಂದನ್ನು ಕಂಡು ಹಿಡಿದಿದ್ದು, ಇದನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ಅವಶ್ಯಕತೆ ಇಲ್ಲ. ನೀವು ಎಲ್ಲೆ ಹೋದರೂ ಡ್ರೋಣ್ ಕ್ಯಾಮರಾ ಸಹಾಯದಿಂದ ಈ ಛತ್ರಿ ನಿಮ್ಮನ್ನು ಹಿಂಬಾಲಿಸುತ್ತದೆ.ಈ ವಿಷಯ ಕುರಿತು ಮಾಹಿತಿ ನೀಡಿರುವ ಅಶಾಹಿ ಪವರ್ ಸರ್ವಿಸ್ ಕಂಪನಿ ಸಿಇಒ ಕೆಂಜಿ ಸುಜುಕಿ, ಕಳೆದ ಮೂರು ವರ್ಷಗಳಿಂದಲೂ ಕೂಡ ಹಾರುವ ಛತ್ರಿಯ ಕುರಿತು ಸಂಶೋಧನೆಯು ನಡೆಸುತ್ತಿದೆ, 2020 ರ ಹೊತ್ತಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
Comments