ಜಿ-ಮೇಲ್ ಬಗ್ಗೆ ಸ್ಪಷ್ಟನೆ ನೀಡಿದ ಗೂಗಲ್!

07 Jul 2018 9:51 AM | Technology
384 Report

ಜಿ-ಮೇಲ್ ಸಂದೇಶಗಳನ್ನು ಥರ್ಡ್ ಪಾರ್ಟಿ ಡೆವಲಪರ್ಸ್ಗಳಿಗೆ ಓದುವಂತಹ ಅವಕಾಶವನ್ನು ನೀಡಿದ್ದ ಗೂಗಲ್, ಇದೀಗ ತನ್ನ ನಿರ್ಧಾರದಿಂದ ಹಿಂದೆ ಹಿಂಪಡೆದಿದೆ.

ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವಂತಹ ಗೂಗಲ್, ಮೂರನೇ ವ್ಯಕ್ತಿಗಳಿಗೆ ಬಳಕೆದಾರರ ಖಾಸಗಿ ಮೇಲ್ ಸಂದೇಶಗಳನ್ನು ಓದಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಕೆಲವೇ ಸಂದರ್ಭಗಳಲ್ಲಿ ಮಾತ್ರ ಇ-ಮೇಲ್ ಕ್ಲೈಂಟ್, ಟ್ರಿಪ್ ಪ್ಲ್ಯಾನರ್, ಕಸ್ಟಮರ್ ರಿಲೇಷನ್ಸ್ ಸೇರಿದಂತೆ, ಹೊರಗುತ್ತಿಗೆ ಸಂಸ್ಥೆಗಳಿಗೆ ಬಳಕೆದಾರರ ಅನುಮತಿ ಪಡೆದು ಜಿ-ಮೇಲ್ ಓದುವ ಅವಕಾಶವಿದೆ ಎಂದು ಗೂಗಲ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ. ಥರ್ಡ್ ಪಾರ್ಟಿ ಆ್ಯಪ್ ಡೆವಲಪರ್ಸ್ಗಳಿಗೆ ಜಿ-ಮೇಲ್ ಓದುವ ಅವಕಾಶಗಳನ್ನು ಗೂಗಲ್ ನೀಡಿದೆ ಎಂದು ಅಮೆರಿಕದ ಪ್ರಖ್ಯಾತ ವೃತ್ತ ಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್ ಈ ಹಿಂದೆ ವರದಿ ಮಾಡಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ.

Edited By

Manjula M

Reported By

Manjula M

Comments