ಅಯ್ಯೊ..! ಏನ್ ಕಾಲ ಗುರು..? ರೋಬೋಗಳ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟ್ರೆಸ್ಟಿಂಗ್ ವಿಷಯ..!

ಅಬ್ಬಬ್ಬಾ..! ಏನ್ ಕಾಲ ಬಂತಪ್ಪ..? ಟೆಕ್ನಾಲಿಜಿಯನ್ನ ಬಳಸಿಕೊಳ್ಳೋದ್ರಲ್ಲಿ ಜನ ಎಷ್ಟು ಮುಂದುವರೆದಿದ್ದಾರೆ ಗೊತ್ತಾ. ರೋಬೋಗಳನ್ನ ಬಳಸಿಕೊಂಡು ಬಟ್ಟೆ ಹೊಗೆಯೋದು, ಅಡುಗೆ ಮಾಡೋದು, ಜೊತೆಯಲ್ಲಿ ವಾಕಿಂಗ್ ಮಾಡೋದನ್ನೆಲ್ಲಾ ನೋಡಿದ್ದೀವಿ. ಆದ್ರೆ ಈಗ ರೋಬೋಗಳ ಜೊತೆಯಲ್ಲಿಯೇ ಸಂಸಾರ ಮಾಡೋದು..! ಇದೇನಪ್ಪಾ ರೋಬೋ ಜೊತೆ ಸಂಸಾರಾನಾ ಅಂತಿದೀರಾ... ಹಾಗಾದ್ರೆ ಮಕ್ಕಳಾಗ್ತಾವ ಅಂತ ಯೋಚನೆ ಮಾಡುತ್ತಿದ್ದಿರಾ..? ಮುಂದೆ ಓದಿ..
ಎಸ್… ತಂತ್ರಜ್ಞಾನ ತುಂಬಾ ಮುಂದುವರಿದಿದೆ ಅಂದ್ರೆ ರೋಬೋಟ್ ಗಳು ಕೂಡ ಮನುಷ್ಯರಿಗಿಂತ ಕಮ್ಮಿ ಇಲ್ಲ. ನಮ್ಮ ಭಾವನೆಗಳನ್ನು ಅರ್ಥಮಾಡಿಕೊಂಡು ಅದಕ್ಕೆ ಸ್ಪಂದಿಸುತ್ತವೆ. ಎಷ್ಟೋ ಜನರಿಗೆ ಈಗ ರೋಬೋಟ್ ಗಳೇ ಸಂಗಾತಿಗಳಾಗಿವೆ.. ಸದ್ಯದಲ್ಲೇ ರೋಬೋಟ್ ಗಳು ಕೂಡ ಮಗುವಿಗೆ ಜನ್ಮ ನೀಡಲಿವೆ ಎಂದು ತಿಳಿಸಿದ್ದಾರೆ ವಿಜ್ಞಾನಿಗಳು. ಮನುಷ್ಯರು ಮತ್ತು ರೋಬೋಟ್ ಗಳ ನಡುವಣ ಸೆಕ್ಸ್ ಈಗಾಗ್ಲೇ ಪ್ರಚಲಿತದಲ್ಲಿದೆ. ಹಾಗಾಗಿ ಮನುಷ್ಯ ಮತ್ತು ರೋಬೋಟ್ ಸೇರಿದರೆ ಮಗು ಕೂಡ ಜನಿಸಲು ಸಾಧ್ಯ ಅಂತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಇತ್ತೀಚೆಗೆ ನಡೆಸಿರುವಂತಹ ಸ್ಟೆಮ್ ಸೆಲ್ ಸಂಶೋಧನೆ ಮತ್ತು ಕೃತಕ ಕ್ರೋಮೋಸೋಮ್ ಗಳಿಂದ ಇದು ಸಾಧ್ಯವಾಗಲಿದೆ ಎಂದಿದ್ದಾರೆಎ. ಮುಂದಿನ 100 ವರ್ಷಗಳೊಳಗೆ ರೋಬೋಟ್ ಬೇಬಿ ಗ್ಯಾರಂಟಿ ಎಂದು ತಿಳಿಸಿದ್ದಾರೆ. ಡಾ.ಡೇವಿಡ್ ಲೆವಿ. ಓಹಿಯೋ ಸ್ಟೇಟ್ ಯೂನಿವರ್ಸಿಟಿ ವಿಜ್ಞಾನಿಗಳು ಇದಕ್ಕಾಗಿಯೇ ಚಿಪ್ ಒಂದನ್ನು ಕಂಡುಹಿಡಿದಿದ್ದಾರಂತೆ. ಖಂಡಿತಾ ಮುಂಬರುವ ಯುವ ಪೀಳಿಗೆಗಳಿಗೆ ಈ ರೋಬೋಟ್ ಬೇಬಿಗಳು ಕಾಮನ್ ಆಗಿಬಿಡುತ್ತವೆ ಎನ್ನಬಹುದು.
Comments