ವಾಟ್ಸಾಪ್ ನ ಮತ್ತೊಂದು ನ್ಯೂ ಫೀಚರ್

ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಹೊಸ ಹೊಸ ಫೀಚರ್ ಗಳನ್ನು ಶುರು ಮಾಡುತ್ತಿದೆ. ವಾಟ್ಸಾಪ್ ಆಂಡ್ರಾಯ್ಡ್ ಬೀಟಾ ಆ್ಯಪ್ ನಲ್ಲಿ ಹೊಸ ಫೀಚರ್ ಒಂದನ್ನು ಶುರು ಮಾಡಿದೆ. ಇದು ಹಣಕಾಸಿನ ವ್ಯವಹಾರವನ್ನು ಮತ್ತಷ್ಟು ಸುಲಭಗೊಳಿಸಲು ಸಾಧ್ಯವಾಗುತ್ತದೆ.
ಈ ಹೊಸ ಫೀಚರ್ ನಲ್ಲಿ ವಾಟ್ಸಾಪ್ ಮೂಲಕ ಸ್ನೇಹಿತರಿಂದ ಹಾಗೂ ವಾಟ್ಸಾಪ್ ಬಳಕೆದಾರರಿಂದ ಹಣವನ್ನು ಸ್ವೀಕಾರ ಮಾಡಬಹುದಾಗಿದೆ. ಕೆಲ ದಿನಗಳ ಹಿಂದಷ್ಟೇ ವಾಟ್ಸಾಪ್ ಬಳಕೆದಾರರಿಗಾಗಿ ಕ್ಯೂಆರ್ ಕೋಡ್ ಫೀಚರ್ ಅನ್ನು ಕೂಡ ನೀಡಿತ್ತು. ಇದನ್ನು ಸ್ಕ್ಯಾನ್ ಮಾಡಿ ಬಳಕೆದಾರರು ಹಣವನ್ನು ಕಳುಹಿಸಬಹುದಿತ್ತು. ಈ ಫೀಚರ್ ಪಡೆಯಲು ಬಳಕೆದಾರರು ವಾಟ್ಸಾಪ್ ಸೆಟ್ಟಿಂಗ್ ಗೆ ಹೋಗಬೇಕು. ಅದ್ರಲ್ಲಿ ಪೇಮೆಂಟ್ ಆಪ್ಶನ್ ಸಿಗಲಿದೆ. ಅದ್ರಲ್ಲಿ ನ್ಯೂ ಪೇಮೆಂಟ್ ಆಪ್ಶನ್ ಸೆಲೆಕ್ಟ್ ಮಾಡಬೇಕು. ಇದ್ರಲ್ಲಿ to UPI ID ಅಥವಾ QR Code ಕಾಣಿಸಲಿದೆ. ಅದನ್ನು ಕ್ಲಿಕ್ ಮಾಡಿದ್ರೆ ನಿಮಗೆ ಮತ್ತೆರಡು ಆಪ್ಶನ್ ಸಿಗಲಿದೆ. ಅದ್ರಲ್ಲಿ ನೀವು ಹಣ ಕಳುಹಿಸಬಹುದು ಅಥವಾ ಹಣವನ್ನು ಸ್ವೀಕಾರ ಮಾಡಬಹುದು. ಇದು ಕೆಲವೇ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ವಾಟ್ಸಾಪ್ ಬೀಟಾ ವರ್ಜನ್ ಬಳಸುತ್ತಿರುವವರಿಗೆ ಮಾತ್ರ ಈ ಸೌಲಭ್ಯವು ಸಿಗಲಿದೆ.ಶೀಘ್ರದಲ್ಲಿಯೇ ಎಲ್ಲರಿಗೂ ಈ ಫೀಚರ್ ಸಿಗಲಿದೆ ಎಂದು ವಾಟ್ಸಾಪ್ ತಿಳಿಸಿದೆ.
Comments