ವಾಟ್ಸಾಪ್ ಯೂಸ್ ಮಾಡ್ತಿದ್ದಿರಾ? ಹಾಗಾದ್ರೆ ಬಿ ಕೇರ್ ಫುಲ್..!

ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಡೇಟಾ ವಿವಾದ ಇನ್ನೂ ಮುಗಿದಿಲ್ಲ.. ಆದರೆ ಈಗ ಅದಕ್ಕೂ ಮೊದಲು ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ. ಫೇಸ್ಬುಕ್ ನಂತೆ ವಾಟ್ಸಾಪ್ ಕೂಡ ಬಳಕೆದಾರರ ಮಾಹಿತಿಯನ್ನು ಕಲೆ ಹಾಕುತ್ತಿದೆಯಂತೆ. ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ವಾಟ್ಸಾಪ್ ಬಳಕೆದಾರರ ಡೇಟಾಗಳನ್ನು ಸಂಗ್ರಹಿಸಿರುವುದಾಗಿ ಒಪ್ಪಿಕೊಂಡಿದೆ..
ಜನಪ್ರಿಯ ಮೆಸ್ಸೇಜಿಂಗ್ ಆ್ಯಫ್ ವಾಟ್ಸಾಪ್ ಅಪ್ಲಿಕೇಷನ್ ಬಳಕೆದಾರರಿಗೆ ಸುರಕ್ಷಿತವಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಇಸ್ರೇಲ್ ನಲ್ಲಿ ಫೇಸ್ಬುಕ್ ಹಾಗೂ ವಾಟ್ಸಾಪ್ ಎರಡಕ್ಕೂ ಒಂದೇ ಸರ್ವರ್ ಬಳಸಲಾಗ್ತಿದೆ ಎಂಬ ಸುದ್ದಿ ಕೂಡ ಬಂದಿತ್ತು . ವಾಸ್ತವವಾಗಿ ವಾಟ್ಸಾಪ್ ಎಂಡ್ ಟು ಎಂಡ್ ಎನ್ಕ್ರಿಪ್ಶನ್ನಲ್ಲಿ ಬಳಕೆದಾರರ ಭದ್ರತೆಯನ್ನು ನೀಡುತ್ತದೆ. ಇಬ್ಬರ ನಡುವಿನ ಮಾತುಕತೆಯಾಗಲಿ ವಿಡಿಯೋ ಆಗಲಿ ಚಿತ್ರಗಳಲ್ಲಿ ಮೂರನೇಯವನ ಪ್ರವೇಶ ಸಾಧ್ಯವಾಗುವುದಿಲ್ಲ. . ಹಾಗಾಗಿ ವಾಟ್ಸಾಪ್ ಸುರಕ್ಷಿತ ಎಂದು ನಂಬಲಾಗಿತ್ತು.ಆದರೆ ಗ್ರೂಪ್ ಚಾಟ್ ನಲ್ಲಿ ಎಂಡ್ ಟು ಎಂಡ್ ಎನ್ಕ್ರಿಪ್ಶನ್ ನೀಡುವುದಿಲ್ಲ. ಇದು ಬಳಕೆದಾರರ ಗೌಪ್ಯತೆಗೆ ಧಕ್ಕೆ ಉಂಟಾಗುತ್ತದೆ ಎನ್ನಲಾಗಿದೆ.ಅಂದ್ರೆ ಡೇಟಾ ಕಳ್ಳತನವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಇನ್ನೂ ಮುಂದೆ ಯಾರಿಗಾದರೂ ಸಂದೇಶ ಕಳುಹಿಸುವಾಗ ಜೋಪಾನ.
Comments