100 ಪಟ್ಟು ವೇಗದಲ್ಲಿ ಕಂಪ್ಯೂಟರ್ ಕೆಲಸ ಮಾಡಬೇಕೇ? ಇಲ್ಲಿದೆ ನೋಡಿ ಟಿಪ್ಸ್..!

ಕಂಪ್ಯೂಟರ್ ಹಾಗೂ ಎಲ್ಲ ಆಪ್ಟಿಕ್ ಸಂವಹನ ಸಾಧನಗಳು 100 ಪಟ್ಟು ವೇಗದಲ್ಲಿ ಕೆಲಸ ಮಾಡಲು ಸಾಧ್ಯವಾಗಿಸುವ ಮ್ಯಾಜಿಕ್ ಚಿಪ್ ಅನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.
ಈ ಟೆರಾಹರ್ಟ್ಸ್ ಚಿಪ್, ಟಿಎಚ್‌ಝೆಡ್ ಅಂತರವನ್ನು ಕಡಿಮೆ ಮಾಡುವಲ್ಲಿ ಮತ್ತು ಹೊಸ ಹಾಗೂ ಇನ್ನಷ್ಟು ಶಕ್ತಿಶಾಲಿ ವೈರ್‌ಲೆಸ್ ಸಾಧನಗಳನ್ನು ಅಭಿವೃದ್ಧಿ ಪಡಿಸುವಲ್ಲಿ ನೆರವಾಗಲಿದೆ. ಇದರ ಸಹಾಯದಿಂದ ಯಾವುದೇ ಡಾಟಾವನ್ನು ಅತ್ಯಧಿಕ ವೇಗದಲ್ಲಿ ಕಳುಹಿಸಲು ಸಾಧ್ಯವಾಗಲಿದೆ ಎಂದು ಇಸ್ರೇಲ್‌ನ ಜೆರುಸಲೇಂ ಹೆಬ್ರೊ ವಿಶ್ವವಿದ್ಯಾನಿಲಯದ ಸಂಶೋಧಕ ಯುರಿಯಲ್ ಲೆವಿ ಹೇಳಿದ್ದಾರೆ.
ಹೈಟೆಕ್ ಸಂಶೋಧನೆಗಳ ಜಗತ್ತಿನಲ್ಲಿ ಇದು ಕ್ರಾಂತಿಕಾರಕ ತಂತ್ರಜ್ಞಾನವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಇಂದೆ ಟೆರಾಹರ್ಟ್ಸ್ ಮೈಕ್ರೊಚಿಪ್ ಅಭಿವೃದ್ಧಿಪಡಿಸಲು ಅಧಿಕ ಬಿಸಿಯಾಗುವಿಕೆ ಹಾಗೂ ಗಾತ್ರ ದೊಡ್ಡ ಸಮಸ್ಯೆಯಾಗಿತ್ತು. ಆದರೆ ಲೇಸರ್ ಹಾಗೂ ಫೋಟೊನಿಕ್ಸ್ ರಿವ್ಯೆ ನಿಯತಕಾಲಿಕದಲ್ಲಿ ಪ್ರಕಟವಾದ ಈ ಸಂಶೋಧನಾ ಪ್ರಬಂಧದಲ್ಲಿ ಆಪ್ಟಿಕ್ ಸಂವಹನದ ವೇಗವನ್ನು ವಿಶ್ವಾಸಾರ್ಹವಾಗಿ ಸಮನ್ವಯಗೊಳಿಸುವ ಎಲೆಕ್ಟ್ರಾನಿಕ್ಸ್ ಆಪ್ಟಿಕ್ ತಂತ್ರಜ್ಞಾನ ಪರಿಕಲ್ಪನೆಯ ಪುರಾವೆಗಳನ್ನು ವಿವರಿಸಲಾಗಿದೆ.
Comments