ಸ್ಮಾರ್ಟ್‌ಫೋನ್ ಚಟಕ್ಕೆ ಬಿದ್ದು ಹಾದಿ ತಪ್ಪುವ ಮಕ್ಕಳನ್ನು ತಡೆಯಲು ಮುಂದಾದ ಆಪಲ್

ಮಕ್ಕಳನ್ನು ಸ್ಮಾರ್ಟ್‌ಫೋನ್ ಚಟದಿಂದ ದೂರ ಇರಿಸಲು ಮತ್ತು ಪೋಷಕರಿಗೆ ತಮ್ಮ ಮಕ್ಕಳು ಸ್ಮಾರ್ಟ್‌ಫೋನ್ ಅನ್ನು ಯಾವ ಮಾದರಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿಸಲು ಆಪಲ್ ಸಂಸ್ಥೆ ತನ್ನ ವೆಬ್ ಪೇಜ್ ನಲ್ಲಿ ಫ್ಯಾಮಿಲೀಸ್ ಎಂಬ ಹೊಸ ಆಯ್ಕೆಯನ್ನು ಪೋಷಕರಿಗಾಗಿಯೇ ನೀಡಲು ಮುಂದಾಗಿದೆ.
ಈ ಮೂಲಕ ಸ್ಮಾರ್ಟ್‌ಫೋನಿನಲ್ಲಿ ಮಕ್ಕಳು ಹಾದಿ ತಪ್ಪುವುದನ್ನು ತಡೆಯಲು ಮುಂದಾದ ಆಪಲ್. ಆಪಲ್ ನೀಡಿರುವ ಫ್ಯಾಮಿಲೀಸ್ ಪೇಜ್ ನಲ್ಲಿ ಆಸ್ಕ್ ಟು ಬೈ( Ask To Buy) ಮೂಲಕ ಪೋಷಕರು ತಮ್ಮ ಮಕ್ಕಳು ಬಳಕೆ ಮಾಡಬಹುದಾದ ಆಪ್ ಗಳಿಗೆ, ಐಟ್ಯೂನ್‌ಗಳಿಗೆ ನಿರ್ಬಂಧ ವಿಧಿಸಿ ಹೊಸ ಆಪ್ ಗಳನ್ನು ಖರೀದಿ ಮಾಡದಂತೆ ತಡೆಯವ ಅವಕಾಶವನ್ನು ಮಾಡಿಕೊಟ್ಟಿದೆ. ಇದರಿಂದಾಗಿ ಮಕ್ಕಳ ಮೇಲೆ ನಿಯಂತ್ರಣ ಸಾಧಿಸಲು ಪೋಷಕರಿಗೆ ಸಾಧ್ಯವಾಗಲಿದೆ. ಇನ್ನು ಇದೇ ಪೇಜ್ ನಲ್ಲಿರುವ ಫೈಂಡ್ ಮೈ ಫ್ರೆಂಡ್ಸ್ ಆಯ್ಕೆಯನ್ನು ಬಳಕೆ ಮಾಡಿಕೊಳ್ಳುವ ಮೂಲಕ, ತಮ್ಮ ಮಕ್ಕಳು ಯಾವ ಪ್ರದೇಶಕ್ಕೆ ಹೋಗಿದ್ದಾರೆ, ಎಷ್ಟು ಸಮಯ ಪ್ರಯಾಣ ಮಾಡಿದ್ದಾರೆ ಎಂಬ ಮಾಹಿತಿಯನ್ನು ಪಡೆಯಬುದಾಗಿದೆ.
ಇನ್ನು ಮತ್ತೊಂದು ಫೀಚರ್ ಮೂಲಕ ಆಪ್ ಗಳನ್ನು ಖರೀದಿಸುವುದನ್ನು ನಿರ್ಬಂಧಿಸುವುದು, ಅಶ್ಲೀಲ ಅಂಶಗಳನ್ನು ವೀಕ್ಷಿಸದಂತೆ ತಡೆಗಟ್ಟಬಹುದಾಗಿದೆ. ಇಷ್ಟು ಮಾತ್ರವಲ್ಲದೇ ಪೂರ್ವಾನುಮತಿ ನೀಡಿದ ವೆಬ್ ಸೈಟ್ ಗಳನ್ನಷ್ಟೇ ತಮ್ಮ ಮಕ್ಕಳು ಬಳಕೆ ಮಾಡಬಹುದಾದಂತಹ ಆಯ್ಕೆಯನ್ನೂ ಪೋಷಕರಿಗೆ ಒದಗಿಸಿದೆ. ಈ ನಿಟ್ಟಿನಲ್ಲಿ ಆಪಲ್ ಸಂಸ್ಥೆಯ ಕ್ರಮವೂ ಮೆಚ್ಚುಗೆ ಪಾತ್ರವಾಗಿದ್ದು, ಇತರೆ ಟೆಕ್ ಕಂಪನಿಗಳಿಗೆ ಇದು ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಈ ಮಾದರಿಯ ಸೇವೆಯನ್ನು ಎಲ್ಲೆಡೆಯೂ ನೋಡಲು ಸಾಧ್ಯವಾಗುತ್ತದೆ. ಈ ಮೂಲಕ ಮಕ್ಕಳ ಐಫೋನ್ ವ್ಯಸನಕ್ಕೆ ಬ್ರೇಕ್ ಹಾಕುವ ಕಾರ್ಯಕ್ಕೆ ಮುಂದಾಗಿದೆ.
Comments