ಇನ್ನಷ್ಟು ಯೂಟ್ಯೂಬ್ ವಿಡಿಯೋ ನೋಡಲು ಇಲ್ಲಿದೆ ಸುಲಭ ಮಾರ್ಗ ..!!

ಸಂದರ್ಭದಲ್ಲಿ ಯೂಟ್ಯೂಬ್ ತನ್ನ ಮೊಬೈಲ್ ಬಳಕೆದಾರರಿಗೆ ಹೊಸ ಮಾದರಿಯ ಸೇವೆಯನ್ನು ನೀಡಲು ಮುಂದಾಗಿದೆ. ಯೂಟ್ಯೂಬ್ ಇನ್ನು ಮುಂದೆ ಡಾರ್ಕ್ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದೆ. ಸದ್ಯ ಮೊದಲಿಗೆ ಇದು ಐಫೋನ್ ಬಳಕೆದಾರರಿಗೆ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ.
ಈಗಾಗಲೇ ಡಾರ್ಡ್ ಯೂಟ್ಯೂಬ್ ಪ್ರಾಯೋಗಿಕ ಸೇವೆಯೂ ಆರಂಭವಾಗಿದ್ದು, ಶೀಘ್ರವೇ ಆಪಲ್ ಬಳಕೆದಾರರಿಗೆ ಈ ಸೇವೆಯೂ ದೊರೆಯಲಿದೆ. ಇದಾದ ನಂತರದಲ್ಲಿ ಆಂಡ್ರಾಯ್ಡ್ ಬಳಕೆದಾರರು ಈ ಹೊಸ ಸೇವೆಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಇದು ಬಳಕೆದಾರರಿಗೆ ವಿಡಿಯೋ ನೋಡುವ ಅನುಭವನ್ನು ಹೆಚ್ಚು ಮಾಡಲಿದೆ. ಇದು ಹೆಚ್ಚು ಸಮಯ ಮೊಬೈಲ್ ನಲ್ಲಿ ವಿಡಿಯೋ ನೋಡಿದರು ಕಣ್ಣಿಗೆ ಯಾವುದೇ ಹಾನಿಯನ್ನು ಉಂಟು ಮಾಡುವುದಿಲ್ಲ. ಅಲ್ಲದೆ ವಿಡಿಯೋ ಸುತ್ತಲು ಇರುವ ಆಯ್ಕೆಗಳು ಕಪ್ಪು ಬಣ್ಣದಲ್ಲೇ ಇರುವುದರಿಂದ ವಿಡಿಯೋ ನೋಡುವ ವಿಧಾನವೂ ಬದಲಾಗಲಿದ್ದು, ಹೆಚ್ಚು ಹೊತ್ತು ವಿಡಿಯೋಗಳನ್ನು ನೋಡಬಹುದಾಗಿದೆ. ಮಾರುಕಟ್ಟೆಯಲ್ಲಿ ಡಾರ್ಕ್ ಮೋಡ್ ಆಪ್ ಗಳ ಜನಪ್ರಿಯತೆಯೂ ಹೆಚ್ಚಾಗುತ್ತಿದೆ. ಇದೆ ಕಾರಣಕ್ಕಾಗಿ ಯೂಟ್ಯೂಬ್ ಸಹ ತನ್ನ ಬಳಕೆದಾರರಿಗೆ ಡಾರ್ಕ್ ಆವೃತ್ತಿಯ ಯೂಟ್ಯೂಬ್ ಅನ್ನು ಪರಿಚಯ ಮಾಡಲು ಮುಂದಾಗಿದೆ. ಇದರಿಂದಾಗಿ ಬಳಕೆದಾರರು ಹೆಚ್ಚಿನ ಸಮಯವನ್ನು ಯೂಟ್ಯೂಬ್ ನಲ್ಲಿಯೇ ಕಳೆಯುವಂತಾಗಲಿದೆ. ಈಗಾಗಲೇ ಭಾರತದಲ್ಲಿ ಅತೀ ಹೆಚ್ಚಿನ ಮಂದಿ ಯೂಟ್ಯೂಬ್ ಬಳಕೆದಾರರಿದ್ದು, 4G ವೇಗದ ಇಂಟರ್ನೆಟ್ ಸೇವೆಯೂ ಉಚಿತವಾಗಿ ದೊರೆತ ಹಿನ್ನಲೆಯಲ್ಲಿ ಬಳಕೆದಾರರು ಹೆಚ್ಚಿನ ಸಮಯವನ್ನು ಯೂಟ್ಯೂಬ್ ನಲ್ಲಿಯೇ ಕಳೆಯುತ್ತಿದ್ದಾರೆ ಎನ್ನಲಾಗಿದೆ.
Comments