'ಮೊಬೈಲ್ ಕ್ಲೀನ್ ಮಾಡಲು' ಸೋಪೊಂದು ಮಾರುಕಟ್ಟೆಗೆ ಬಂದಿದೆ

ಹೌದು, ಈಗಾಗಲೇ ನಡೆದಿರುವ ಹಲವು ಅಧ್ಯಯನಗಳಲ್ಲಿ ಮೊಬೈಲ್ ಮೇಲೆ ಬಚ್ಚಲು ಮನೆಯಲ್ಲಿರುವ ಕಮೋಡ್‍ನಲ್ಲಿ ಇರುವಷ್ಟೇ ಬ್ಯಾಕ್ಟೀರಿಯಾಗಳು ಇವೆ ಎಂದು ತಿಳಿದುಬಂದಿದೆ. ಧೂಳು, ಅಂಗೈ ಬೆವರು ಹಾಗೂ ಕೊಳಕು ತಾಗಿ ಮೊಬೈಲ್ ಮೇಲಿನ ಅಂಚುಗಳು ಬ್ಯಾಕ್ಟೀರಿಯಾದ ತಾಣವಾಗಿರುವುದರಿಂದ ಮೊಬೈಲ್ ಸೋಪನ್ನು ಮಾರುಕಟ್ಟೆಗೆ ತರಲಾಗಿದೆ.
ಮೊಬೈಲ್ ಸೋಪು ಯಾವುದು? ಮೊಬೈಲ್ ಅನ್ನು ಹೇಗೆ ಕ್ಲೀನ್ ಮಾಡುತ್ತದೆ? ಮತ್ತು ಅದರ ಬೆಲೆ ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್ಗಳಲ್ಲಿ ತಿಳಿಯಿರಿ. ಪೋನ್‍ಸೋಪ್ 3.೦(PhoneSoap 3.0) : ಮೊಬೈಲ್ ಅನ್ನು ಕ್ಲೀನ್ ಮಾಡಲು ಬಂದಿರುವ ಹೊಸ ಗ್ಯಾಜೆಟ್ಗೆ ಪೋನ್‍ಸೋಪ್ 3.೦ ಎಂದು ಹೆಸರಿಡಲಾಗಿದೆ. ಮೈಕ್ರೋಸಾಪ್ಟ್ ಹ್ಯಾಂಡ್‍ಪಿಕ್ ತ್ರೀಡಿ ಸೊಲ್ಯುಶನ್ಸ್ ಪ್ರೈವೇಟ್ ಲಿಮಿಟೆಡ್ ಅವರು ಹೊರತಂದಿರುವ ಪೋನ್‍ಸೋಪ್ ಮೊಬೈಲ್ ಮೇಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲಿದೆ. ಮೊಬೈಲ್ ಕ್ಲೀನ್ ಮಾಡುವ ಪೋನ್‍ಸೋಪ್ ನಿಮ್ಮ ಮೊಬೈಲ್ ಅನ್ನು ನೀರಿನಿಂದ ತೊಳೆಯುವುದಿಲ್ಲ. ಅದರ ಬದಲಾಗಿ ತಂತ್ರಜ್ಞಾನದ ಸಹಾಯದಿಂದ ಮೊಬೈಲ್ ಮೇಲಿನ ಬ್ಯಾಕ್ಟೀರಾಗಳನ್ನು ಕೊಂದುಹಾಕುತ್ತದೆ. ಫೋನ್ ಮೇಲೆ ಕಡುನೇರಳೆ ಬೆಳಕನ್ನು ಹರಿಸಿ ಬ್ಯಾಕ್ಟೀರಿಯಾಗಳನ್ನು ಹರಿಸಿ ಅವುಗಳ ನಿರ್ನಾಮ ಮಾಡಲಿದೆ. ಪೋನ್‍ಸೋಪ್ ಒಂದು ಪುಟ್ಟ ಪೆಟ್ಟಿಗೆಯಂತಿದೆ.
ಈ ಪಡೆಟ್ಟಿಗೆಯೊಳಗೆ ನಿಮ್ಮ ಮೊಬೈಲ್ ಅನ್ನು ಚಾರ್ಜ್ ಮಾಡಿಕೊಳ್ಳಬಹುದಾದ ಆಯ್ಕೆಯನ್ನು ನೀಡಿಲಾಗಿದ್ದು, ಮೊಬೈಲ್ ಮೇಲೆ ಕುಳಿತಿರುವ ಬ್ಯಾಕ್ಟೀರಿಯಾ ಹಾಗೂ ಕೆಲಬಗೆಯ ವೈರಸ್ಗಳನ್ನು ಕೇವಲ 10 ನಿಮಿಷಗಳಲ್ಲಿ ಸಾಯಿಸಿ ಸೋಂಕನ್ನು ತೆಗೆಯಲಿದೆ. ಪೋನ್‍ಸೋಪ್ ಕಡುನೇರಳೆ ಬೆಳಕನ್ನು ಹರಿಸುಸುವುದರಿಂದ ಈ ಬೆಳಕು ಬ್ಯಾಕ್ಟೀರಿಯಾಗಳ ಡಿಎನ್‍ಎ ಅನ್ನು ಕೆಡಿಸುತ್ತವೆ. ಡಿಎನ್‍ಎ ಕೆಟ್ಟುಹೋದ ಬ್ಯಾಕ್ಟೀರಿಯಾಗಳು ಸಾಯುವುವು ಇಲ್ಲವೇ ಕುಂದಿಹೋಗುವುವು. ಒಟ್ಟಿನಲ್ಲಿ, ಯಾವುದೇ ಸೋಂಕಿಲ್ಲದ ರೀತಿಯಲ್ಲಿ ಈ ಸೋಪಿನ ಪೆಟ್ಟಿಗೆಯಿಂದ ನಿಮ್ಮ ಮೊಬೈಲ್ ಹೊರಬರುತ್ತದೆ. ಯುನಿವರ್ಸಲ್ ಚಾರ್ಜರ್ ಬಳಕೆ ಮಾಡಬಹುದಾದ ಈ ಪೋನ್‍ಸೋಪಿನಲ್ಲಿ ಒಂದು ಸಲ ಸೋಂಕನ್ನು ತೆಗೆಯಲು 4 ನಿಮಿಷಗಳು ಬೇಕಾಗುತ್ತವೆ. ಈ ಪೋನ್‍ಸೋಪ್ ಪೆಟ್ಟಿಗೆಯ ಅಳತೆ 8.5 ಇಂಚು ಉದ್ದ, 5 ಇಂಚು ಅಗಲ ಹಾಗೂ 1.76 ಇಂಚು ಎತ್ತರವಿದ್ದು, ಬೆಲೆ ಸುಮಾರು 3000 ರಿಂದ 5000 ರೂ. ಗಳಿಷ್ಟಿದೆ.
Comments