ಬೆಂಗಳೂರಿನಲ್ಲಿರುವ ಮನೆಗಳ ವಿಳಾಸ ಹುಡುಕುವುದು ಇನ್ನು ಬಲು ಸುಲಭ

ಬೆಂಗಳೂರಿನಲ್ಲಿ ಅದೆಷ್ಟೋ ಜನರಿಗೆ ಸರಿಯಾದ ವಿಳಾಸ ತಿಳಿಯದೆ ಪರದಾಡುವ ಪರಿಸ್ಥಿತಿ ನೆನ್ನೆ ಮೊನ್ನೆಯದಲ್ಲ ಬೆಂಗಳೂರು ನಗರ ಬಹು ನಗರವಾಗಿ ಬೆಳೆದಿದೆ . ಹೀಗಾಗಿ ಇಲ್ಲಿ ಮನೆಯ ವಿಳಾಸ ತಿಳಿಯುವುದು ಬಹುದೊಡ್ಡ ಕೆಲಸವಾಗಿದೆ. ಆದರೆ ಇನ್ನು ಮುಂದೆ ಆಗಿಲ್ಲ.
ಬೆಂಗಳೂರಿನಲ್ಲಿ ಮನೆ ಅಡ್ರೆಸ್ ಹುಡುಕಲು ಬಿಬಿಎಂಪಿ ಡಿಜಿ-7 ಎಂಬ ಹೊಸ ಆಯಪ್ ರಿಲೀಸ್ ಮಾಡಿದೆ. ಬೆಂಗಳೂರಿನ ನಗರ ಅಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಹೊಸ ಆಯಪ್ಗೆ ಗುರುವಾರ ಚಾಲನೆ ನೀಡಿದರು. ಇನ್ನೂ, ಆ ಆಯಪ್ನಲ್ಲಿ ನಗರದ 19 ಲಕ್ಷ ಆಸ್ತಿಗಳಿಗೆ ಒಂದೊಂದು ಡಿಜಿಟಲ್ ನಂಬರ್ ನೀಡಲಾಗುತ್ತಿದೆ. ಈ ನಂಬರ್ ಅನ್ನು ಜಿಪಿಎಸ್ ಮ್ಯಾಪ್ಗೆ ಲಿಂಕ್ ಮಾಡಲಾಗಿದ್ದು, ಈ ನಂಬರನ್ನ ಪಾಲಿಕೆಯೇ ನಗರದಲ್ಲಿ ಎಲ್ಲ ಆಸ್ತಿಗಳಿಗೆ ಅಳವಡಿಸಲಿದೆ.
ಇದರ ಜೊತೆಯಲ್ಲಿ ಮನೆ ಮಾಲೀಕರು ಈ ಆಯಪ್ ಡೌನ್ ಲೋಡ್ ಮಾಡಿಕೊಂಡು ಆಸ್ತಿಗಳಿಗೆ ನೀಡಿದ ಮೊಬೈಲ್ ನಂಬರ್ ನೀಡಿ ರಿಜಿಸ್ಟರ್ ಮಾಡಿಕೊಂಡರೆ ಸಾಕು. ನಿಮ್ಮ ಮನೆ ಅಥವಾ ಆಸ್ತಿಯ ಡಿಜಿಟಲ್ ನಂಬರ್ ಆಪ್ನಲ್ಲಿ ಸಿಗಲಿದೆ. ಪಾಲಿಕೆ ಕಾಲ್ ಸೆಂಟರ್, ವೆಬ್ ಸೈಟ್ ಮೂಲಕವೂ ಮನೆ ಡಿಜಿಟಲ್ ನಂಬರ್ ದೊರೆಯಲಿದೆ. ಒಟ್ಟಿನಲ್ಲಿ ಬಿಬಿಎಂಪಿ ಈ ಹೊಸ ಆಯಪ್ ಜನಸ್ನೇಹಿಯಾಗಿದೆ. ಆದರೆ . ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ, ಜನ ಹೇಗೆ ಬಳಸಿಕೊಳ್ಳುತ್ತಾರೆ ಅನ್ನೊಂದು ಮುಂಬರುವ ದಿವಸದಲ್ಲಿ ತಿಳಿದು ಬಂದಿದೆ.
Comments