ಹೊಸ ದಾಖಲೆ ನಿರ್ಮಿಸುವತ್ತ ಹೆಜ್ಜೆ ಹಾಕಿರುವ ಜಿಯೋ ಫೈ

ಇತ್ತೀಚಿಗೆ ಜಿಯೊ ಫೈ ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿ ಸಫಲಗೊಂಡಿದೆ. ಇನ್ನೊಂದೆಡೆ ಇತರೆ ಕಂಪನಿಯವರನ್ನು ಹಿಂದಿಕ್ಕುವ ಮೂಲಕ ಯಶಸ್ಸಿನೆಡೆಗೆ ಹೆಜ್ಜೆ ಹಾಕಿದೆ. ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸದ್ದು ಮಾಡುತ್ತಿರುವ ಜಿಯೊ ಫೈ ಬಳಕೆದಾರರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಶೇ.85ರಷ್ಟು ಮಾರುಕಟ್ಟೆ ಪಾಲನ್ನು ತನ್ನದಾಗಿಸಿಕೊಂಡಿದೆ. ಕಡಿಮೆ ಬೆಲೆಗೆ ದೊರೆಯುತ್ತಿದ್ದ ಜಿಯೋ ಫೈ ಸಾಮಾನ್ಯ ಬಳಕೆದಾರರ ಕೈಗೆಟುಕುವಂತೆ ಇದ್ದ ಕಾರಣಕ್ಕಾಗಿಯೇ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿತ್ತು. ಮಾರುಕಟ್ಟೆಯಲ್ಲಿ ಇರುವಂತಹ ಬೇರೆ ಡೇಟಾ ಕಾರ್ಡ್ ಗಳಿಗೆ ಪ್ರಬಲ ಸ್ಪರ್ಧೆಯನ್ನು ನೀಡಿದ ಜಿಯೋ, ಉತ್ತಮ ಆಫರ್ ಗಳನ್ನು ತನ್ನ ಬಳಕೆದಾರರಿಗೆ ನೀಡದರ ಫಲವಾಗಿ ಡೇಟಾ ಕಾರ್ಡ್ ಗಳ ಬೇಡಿಕೆಯನ್ನು ಹೆಚ್ಚು ಮಾಡಿತು.
ಅದಲ್ಲಿಯೂ 4G ವೇಗದ ಸೇವೆಯನ್ನು ನೀಡಿದ್ದ ಹೆಚ್ಚಿನ ಮಂದಿಯನ್ನು ತಲುಪಲು ನೇರವಾಯಿತು. ಅಲ್ಲದೇ ಜಿಯೋ ತನ್ನ ಡೇಟಾ ಕಾರ್ಡ್ ಹೊಂದಿದವರಿಗೆ ಆಪ್ ಬಳಕೆ ಮಾಡಿಕೊಂಡು ಉಚಿತವಾಗಿ ಕರೆಗಳನ್ನು ಮಾಡುವ ಅವಕಾಶವನ್ನು ಮಾಡಿಕೊಟ್ಟ ಕಾರಣದಿಂದಾಗಿ 2G-3G ಸಪೋರ್ಟ್ ಮಾಡುವ ಸ್ಮಾರ್ಟ್ ಪೋನ್ ಬಳಕೆದಾರರು ಈ ಜಿಯೋ ಫೈ ಡಿವೈಸ್ ಬಳಕೆಗೆ ಹೆಚ್ಚಿನ ಒಲವು ತೋರಿಸಿದರು ಎನ್ನಲಾಗಿದೆ. ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟು ಹಾಕಿದ ಮಾದರಿಯಲ್ಲಿ ಜಿಯೋ, ಡೇಟಾ ಕಾರ್ಡ್ ಮಾರುಕಟ್ಟೆಯಲ್ಲಿಯೂ ಹುಟ್ಟುಹಾಕಿತ್ತು. ಇಷ್ಟು ದಿನ ಸುಮ್ಮನಿದ್ದ ಏರ್ಟೆಲ್ ಸಹ ತನ್ನ ಬಳಕೆದಾರರಿಗೆ ಕಡಿಮೆ ಬೆಲೆಗೆ ಡೇಟಾ ಕಾರ್ಡ್ ಅನ್ನು ಮಾರಾಟಮಾಡಲು ಮುಂದೆ ಬಂದಿತು.
Comments